ಖ್ಯಾತ ಆ್ಯಂಕರ್ ಅನುಶ್ರೀಗೂ ಡ್ರಗ್ ಕೇಸ್ ಬಿಸಿ; ನೋಟಿಸ್ ಕೊಡಲು ಬೆಂಗಳೂರಿಗೆ ಹೋಗಿದ್ದಾರೆ ಮಂಗಳೂರು ಪೊಲೀಸರು


(ಗಲ್ಫ್ ಕನ್ನಡಿಗ)ಮಂಗಳೂರು; ಖ್ಯಾತ ಆ್ಯಂಕರ್ ಅನುಶ್ರೀಗೂ ಡ್ರಗ್ ಕೇಸ್ ಬಿಸಿ ತಟ್ಟಿದೆ. ರಾಗಿಣಿ, ಸಂಜನಾ ಬಂಧನದ ಬಳಿಕ  ಭಾರಿ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ   ಆ್ಯಂಕರ್ ಅನುಶ್ರೀ ಹೆಸರು ಕೇಳಿಬಂದಿದ್ದು ಆಕೆಗೆ ನೋಟಿಸ್ ನೀಡಲು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

(ಗಲ್ಫ್ ಕನ್ನಡಿಗ)ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧಿತನಾಗಿರುವ ಕಿಶೋರ್ ಶೆಟ್ಟಿ  ಡ್ರಗ್ಸ್ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿರುವುದನ್ನು ಬಾಯಿಬಿಟ್ಟಿದ್ದ. ಆತ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀಗೆ ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.

(ಗಲ್ಫ್ ಕನ್ನಡಿಗ)