ಬೆಳ್ತಂಗಡಿ ಮಿತ್ತಬಾಗಿಲು ಸಮೀಪ ಭೂಕುಸಿತ (Video)
Monday, August 10, 2020
(ಗಲ್ಫ್ ಕನ್ನಡಿಗ)ಮಂಗಳೂರು;ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ
ಮಿತ್ತಬಾಗಿಲು ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಮಧ್ಯಾಹ್ನ ವೇಳೆ ಭೂ ಕುಸಿತ ಉಂಟಾಗಿದೆ.
(ಗಲ್ಫ್ ಕನ್ನಡಿಗ) ಭೂಕುಸಿತದಿಂದಂದ
ಸುಮಾರು 4 ಎಕ್ರೆ ಪ್ರದೇಶದ ಮಣ್ಣು ಕುಸಿತಗೊಂಡಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತವುಂಟಾಗಿದೆ.
(ಗಲ್ಫ್ ಕನ್ನಡಿಗ)ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶವಾಗಿದ್ದು, ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿದೆ. ಈ ಘಟನೆ ಬಗ್ಗೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.