ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು ಹೇಳಿಕೆ; ಅನಂತಕುಮಾರ್ ಹೆಗ್ಡೆ ಕ್ಷಮೆಯಾಚನೆಗೆ ಬಿಎಸ್ಎನ್ಎಲ್ ನೌಕರರ ಆಗ್ರಹ ( video)
Thursday, August 13, 2020
(ಗಲ್ಫ್ ಕನ್ನಡಿಗ)ಕಾರವಾರ ; ಬಿಎಸ್‌ಎನ್‌ಎಲ್ ನೌಕರರು ದೇಶದ್ರೋಹಿಗಳು ಎಂದು ನಿಂದಿಸಿದ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಖಂಡಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.
(ಗಲ್ಫ್ ಕನ್ನಡಿಗ)ನಗರದ ಬಿಎಸ್‌ಎನ್‌ಎಲ್ ಮುಖ್ಯ ಕಚೇರಿ ಎದುರು ಆಲ್ ಯೂನಿಯನ್ ಅಂಡ್ ಅಸೋಸಿಯೇಷನ್ ಆಫ್ ಬಿಎಸ್ಎನ್ಎಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಅನಂತಕುಮಾರ ಹೆಗಡೆ ವಿರುದ್ಧ ಘೋಷಣೆ ಕೂಗಿದರು.
(ಗಲ್ಫ್ ಕನ್ನಡಿಗ) ಬಿಎಸ್‌ಎನ್‌ಎಲ್ ಸಂಸ್ಥೆ ಸ್ವಂತ ಆದಾಯದ ಮೇಲೆ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಯಾವುದೇ ರೀತಿಯ ಹಣ ಅಥವಾ ಬಜೆಟ್‌ನಲ್ಲಿ ಮೀಸಲಿರಿಸಿಲ್ಲ. ಆದರೆ ಇದಾವುದನ್ನೂ ತಿಳಿಯದ ಅನಂತಕುಮಾರ ಹೆಗಡೆ ಅಸಂಬದ್ಧ ಹಾಗೂ ಉದ್ರೇಕಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
(ಗಲ್ಫ್ ಕನ್ನಡಿಗ) ಅನಂತಕುಮಾರ ಹೆಗಡೆ ಹೇಳಿಕೆಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಕೇವಲ ಕಾಗದದ ಮೇಲೆ 4G ಸಂಪರ್ಕ ನೀಡಿದೆ. ಆದರೆ ಕಳೆದ ಐದು ವರ್ಷದಲ್ಲಿ 285 ಪ್ರಶ್ನೆಗಳನ್ನ ಸಂಸತ್‌ನಲ್ಲಿ ಕೇಳಿರುವ ಅನಂತಕುಮಾರ ಒಂದು ಪ್ರಶ್ನೆಯನ್ನೂ ಬಿಎಸ್‌ಎನ್‌ಎಲ್ ಬಗ್ಗೆ ಕೇಳಿಲ್ಲ. ಇದೀಗ ಬಿಎಸ್‌ಎನ್‌ಎಲ್ ನೌಕರರು ದೇಶದ್ರೋಹಿಗಳು ಎಂದು ಆರೋಪಿಸಿ ಸಂಸ್ಥೆಯನ್ನ ಮುಚ್ಚಿಸುವುದಾಗಿ ಹೇಳಿರುವುದು ಖಂಡನೀಯ. ಕೂಡಲೇ ಅವರು ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
(ಗಲ್ಫ್ ಕನ್ನಡಿಗ)