ಕಾಂಗ್ರೆಸ್ ನಾಯಕರಿಂದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ನಿಯಮೋಲ್ಲಂಘನೆ: ಮಿಥುನ್ ರೈ, ಶಾಲೆಟ್ ಪಿಂಟೋಗೆ ಕ್ವಾರಂಟೈನ್ ಇಲ್ವ?
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರೆ ಕ್ವಾರಂಟೈನ್ ಉಲ್ಲಂಘಿಸಿದ ಘಟನೆ ನಡೆದಿದೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಶುಕ್ರವಾರ ಮತ್ತು ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಶನಿವಾರ ಕೊರೊನಾ ದೃಢಪಟ್ಟ ಐವನ್ ಡಿಸೋಜ ಡಿಕೆಶಿವಕುಮಾರ್ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಐವನ್ ಡಿಸೋಜ ಅವರಿಗೆ ಶನಿವಾರ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಐವನ್ ಡಿಸೋಜ ಅವರ ಸಂಪರ್ಕದಲ್ಲಿದ್ದ ಎಲ್ಲರೂ ಸ್ವಯಂ ಕ್ವಾರಂಟೈನ್ ಆಗಬೇಕಾಗಿದೆ. ಈಗಾಗಲೇ ಮಾಜಿ ಸಚಿವರಾದ ಯು ಟಿ ಖಾದರ್, ರಮಾನಾಥ ರೈ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಆದರೆ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರ ಕೆಲವು ಕಾಂಗ್ರೆಸ್ ನಾಯಕರು ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿದ್ದಾರೆ.
(ಗಲ್ಪ್ ಕನ್ನಡಿಗ)ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಿಳಾ ಕಾಂಗ್ರೆಸ್ ನಿಂದ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಭಾಗವಹಿಸಿದ್ದರು. ಮಿಥುನ್ ರೈ ಅವರಿಗೆ ಆಗಷ್ಟ್ 17 ರಂದು ಕೊರೊನ ದೃಢಪಟ್ಟಿತ್ತು. ಆದರೆ ಅವರು ನಿಯಮ ಉಲ್ಲಂಘಿಸಿ ಡಿಕೆಶಿವಕುಮಾರ್ ಕಾರ್ಯಕ್ರಮಕ್ಕೆ ಕೊರೊನಾ ದೃಢಪಟ್ಟ 14 ದಿನದಲ್ಲಿಯೆ ಆಗಮಿಸಿದ್ದರು. ಡಿ ಕೆಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರು ಕ್ವಾರಂಟೈನ್ ಆಗಬೇಕಿತ್ತು. ಅದೆ ರೀತಿ ಮಹಿಳಾ ಕಾಂಗ್ರೆಸ್ ಮುಖಂಡೆ ಶಾಲೆಟ್ ಪಿಂಟೋ ಕೂಡ ಡಿ ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದರು. ಅವರು ಕ್ವಾರಂಟೈನ್ ನಲ್ಲಿ ಇರಬೇಕಿತ್ತು. ಐವನ್ ಡಿಸೋಜ ಜೊತೆಗೆ ಸಮೀಪದ ಸಂಪರ್ಕವಿದ್ದ ಇವರಿಗೆ ಕ್ವಾರಂಟೈನ್ ಇಲ್ಲವೆ ಎಂದು ಜನರು ಪ್ರಶ್ನಿಸಿಕೊಳ್ಳುತ್ತಿದ್ದಾರೆ