ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ : ನಟಿ ರಿಯಾ ಚಕ್ರವರ್ತಿ ಹೇಳಿದ್ದು ಹೀಗೆ
(ಗಲ್ಪ್ ಕನ್ನಡಿಗ)ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಮಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ನೀಡಿದ ಹಿನ್ನೆಲೆಯಲ್ಲಿ ನಟಿ ರಿಯಾ ಚಕ್ರವರ್ತಿ ವಕೀಲ ಹೇಳಿಕೆ ನೀಡಿದ್ದಾರೆ.
(ಗಲ್ಪ್ ಕನ್ನಡಿಗ)ಯಾವುದೇ ಏಜೆನ್ಸಿಯ ತನಿಖೆ ನಡೆದರೂ ಸತ್ಯ ಒಂದೇ ಆಗಿರಲಿದೆ ಎಂದು ರಿಯಾ ಚಕ್ರವರ್ತಿ ವಕೀಲ ಸತೀಶ್ ಮನೇಶಿಂದೆ ಹೇಳಿದ್ದಾರೆ. ಸಿಬಿಐ ನಡೆಸುವ ತನಿಖೆಗೆ ಒಳಗಾಗಲು ರಿಯಾ ಸಿದ್ದರಿದ್ದಾರೆ ಎಂದು ಅವರು ಹೇಳಿದ್ದಾರೆ.
(ಗಲ್ಪ್ ಕನ್ನಡಿಗ)ಆತ್ಮಹತ್ಯೆ ಮಾಡಿಕೊಂಡಿರುವ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ಹಣ ವರ್ಗಾವಣೆ ವಿಚಾರವಾಗಿ ರಿಯಾ ಅವರು ಈಗಾಗಲೇ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದರು. ಇದೀಗ ಸಿಬಿಐ ತನಿಖೆ ನಡೆಯಲಿರುವ ಹಿನ್ನೆಲೆಯಲ್ಲಿ ರಿಯಾ ಅವರಿಗೆ ವಿಚಾರಣೆಗೆ ಹಾಜಾರುವಂತೆ ನೋಟಿಸ್ ನೀಡುವ ಸಾಧ್ಯತೆಯಿದೆ..
(ಗಲ್ಪ್ ಕನ್ನಡಿಗ)ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ನಡೆದ ಒಂದು ತಿಂಗಳು ಆಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಬಿಹಾರ ಸರ್ಕಾರದ ನಡುವೆ ತಿಕ್ಕಾಟ ನಡೆದಿತ್ತು. ಇದರ ಮಧ್ಯೆ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ನೀಡಿದೆ