POSITIVE STORY :ಕಾಲಿನಲ್ಲೆ ಪರೀಕ್ಷೆ ಬರೆದ ಬಂಟ್ವಾಳದ ಕೌಶಿಕ್ ನಿಂದ ಸಾಧನೆ- ಕೈ ಯಲ್ಲಿ ಬರೆಯಲಾಗದಿದ್ದರೂ ಈ ವಿದ್ಯಾರ್ಥಿ ಪಡೆದ ಅಂಕವೆಷ್ಟು ಗೊತ್ತೆ?
Monday, August 10, 2020
(ಗಲ್ಫ್ ಕನ್ನಡಿಗ)ಮಂಗಳೂರು; ಕೈಗಳಿಲ್ಲದಿದ್ದರೂ ಯಾರ ಸಹಾಯವು ಪಡೆಯದೆ SSLC ಪರೀಕ್ಷೆ ಬರೆದು ಶ್ಲಾಘನೆಗೆ ಪಾತ್ರವಾಗಿದ್ದ ಕೌಶಿಕ್ ಪರೀಕ್ಷೆಯಲ್ಲಿ ಮೆಚ್ಚುಗೆಯ ಅಂಕ ಪಡೆದಿದ್ದಾರೆ.
(ಗಲ್ಫ್ ಕನ್ನಡಿಗ)ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಕೌಶಿಕ್ ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಅಂಕ ಗಳಿಸಿದ್ದಾರೆ.
(ಗಲ್ಫ್ ಕನ್ನಡಿಗ) ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್ ಗೆ ಬಂದಿವೆ.
(ಗಲ್ಫ್ ಕನ್ನಡಿಗ)ಫಲಿತಾಂಶ ದಿಂದ ಖುಷಿಗೊಂಡ ಕೌಶಿಕ್, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
(ಗಲ್ಫ್ ಕನ್ನಡಿಗ)ಕೌಶಿಕ್ ತನ್ನ ಅಣ್ಣ ಕಾರ್ತಿಕ್. ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾರೆ. ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಲ್ಲಿ ವೈಕಲ್ಯಗಳಿದ್ದರೂ ಕೌಶಿಕ್ ಯಾರ ಸಹಾಯವೂ ಇಲ್ಲದೆ ಕಾಲಿನ ಬೆರಳಲ್ಲೇ ಬರೆಯಲು ಕಲಿತಿದ್ದಾರೆ.
(ಗಲ್ಫ್ ಕನ್ನಡಿಗ) ಕಾಲಿನ ಸಹಾಯದಲ್ಲೇ ಮಣ್ಣಿನ ಕಲಾಕೃತಿ ರಚಿಸುವುದು, ಡ್ಯಾನ್ಸ್ ಮಾಡುವುದು, ಸೈಕಲ್ ನಲ್ಲಿ ಸವಾರಿ, ಈಜು ಈತನ ಆಸಕ್ತಿಯ ವಿಷಯಗಳಾಗಿದೆ.
(ಗಲ್ಫ್ ಕನ್ನಡಿಗ) ಕಾಲಿನ ಬೆರಳಲ್ಲಿ ಪರೀಕ್ಷೆ ಬರೆದು ಶಿಕ್ಷಣ ಸಚಿವರಿಂದ ಗೌರವಕ್ಕೂ ಕೌಶಿಕ್ ಪಾತ್ರರಾಗಿದ್ದರು.