
ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಕರೀನಾ ಕಪೂರ್: ಸೈಫ್ ಆಲಿ ಖಾನ್ ರಿವೀಲ್
(ಗಲ್ಪ್ ಕನ್ನಡಿಗ)ಮುಂಬಯಿ: ಬಾಲಿವುಡ್ ಚೆಲುವೆ ಕರೀನ ಕಪೂರ್ ಎರಡನೆ ಮಗುವಿನ ತಾಯಿಯಾಗುತ್ತಿದ್ದಾರೆ. ಈ ಬಗ್ಗೆ ಪತಿ ಸೈಫ್ ಆಲಿ ಖಾನ್ ಇನ್ಸ್ಟಾ ಗ್ರಾಮ್ ನಲ್ಲಿ ಮಾಹಿತಿಯನ್ನು ಹೊರಗೆಡವಿದ್ದಾರೆ.
ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಹೊಸ ಸದಸ್ಯನ ಆಗಮನ ನಿರೀಕ್ಷೆಯಲ್ಲಿ ಸಂತಸದಲ್ಲಿದ್ದಾರೆ.
2016 ಡಿಸೆಂಬರ್ ನಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಒಂದು ಮಗು ಆಗಿದೆ. ಈ ಮಗುವಿಗೆ ತೈಮುರ್ ಆಲಿ ಖಾನ್ ಎಂದು ಹೆಸರಿಡಲಾಗಿದೆ. ಈ ಜೋಡಿ ತಶಾನ್ ಸಿನಿಮಾ ಸೆಟ್ಟಲ್ಲಿ ಭೇಟಿಯಾಗಿ ಬಳಿಕ ವಿವಾಹವಾಗಿದ್ದರು.
ಈ ಬಗ್ಗೆ ಎದ್ದಿರುವ ಗಾಸಿಪ್ ಗೆ ಸೈಫ್ ಆಲಿ ಖಾನ್ ಸೊದರಿ ಸೋಹಾ, ಕರೀನಾ ಕಫೂರ್ ತಂದೆ ರಣದೀರ್ ಕಪೂರ್ ಸಕಾರಾತ್ಮಕವಾಗಿ ಪ್ರತಿಕ್ರೀಯಿಸಿದ್ದಾರೆ . ಬಾಲಿವುಡ್ ನಲ್ಲಿ ಮೋಡಿ ಮಾಡಿದ ಕರೀನಾ ಕಪೂರ್ ಕೊನೆಯದಾಗಿ ಆಂಗ್ರೆಜಿ ಮಿಡಿಯಮ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಅಮೀರ್ ಖಾನ್ ಜೊತೆಗೆ ಲಾಲ್ ಸಿಂಗ್ ಛಡಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.