ವೆನ್ಲಾಕ್ ನಲ್ಲಿ ಉದ್ಯೋಗವಿದೆ- ಹೆಚ್ಚಿನ ಮಾಹಿತಿ ಇಲ್ಲಿದೆ
(ಗಲ್ಪ್ ಕನ್ನಡಿಗ)ಮಂಗಳೂರು:- ಕೊವೀಡ್-19 ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಇಲ್ಲಿ ಖಾಲಿ ಇರುವ ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಹುದ್ದೆಗಳ ವಿವಿರ ಇಂತಿವೆ:
(ಗಲ್ಪ್ ಕನ್ನಡಿಗ)ಶುಶ್ರೂಷಕರು-16 ಹುದ್ದೆಗಳು, ವಿದ್ಯಾರ್ಹತೆ-ಡಿಪ್ಲೋಮಾ ಇನ್ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು), ವೇತನ ರೂ 25,000. ಫಾರ್ಮಾಸಿಸ್ಟ್-3 ಹುದ್ದೆಗಳು ವಿದ್ಯಾರ್ಹತೆ – ಡಿ-ಫಾರ್ಮಾ (ಫಾರ್ಮಾಸಿ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು) ವೇತನ-20,000.
(ಗಲ್ಪ್ ಕನ್ನಡಿಗ)ಹುದ್ದೆಗಳಿಗೆ 6 ತಿಂಗಳು ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಆಧಾರದಲ್ಲಿ ನೇರ ಸಂದರ್ಶನದ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಗಸ್ಟ್ 10 ರಂದು ಬೆಳಿಗ್ಗೆ 11 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್, ನೇತ್ರಾವತಿ ಸಭಾಂಗಣದಲ್ಲಿ ನೇರ ಸಂದರ್ಶನ ನಡೆಯಲಿದೆ. ಸದ್ರಿ ದಿನಾಂಕದಂದು ಅಭ್ಯರ್ಥಿಗಳು ವಿದ್ಯಾರ್ಹತೆ ಮೂಲ ಪ್ರಮಾಣ ಪತ್ರ ಹಾಗೂ ಅದರ ಸ್ವಯಂ ದೃಢೀಕೃತ ನಕಲು ಪ್ರತಿ, ಅನುಭವ ಹೊಂದಿದ್ದಲ್ಲಿ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ನಿಗದಿತ ಅರ್ಜಿಯೊಂದಿಗೆ ಹಾಜರಾಗಬೇಕು.
(ಗಲ್ಪ್ ಕನ್ನಡಿಗ)ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಹಂಪನಕಟ್ಟಾ, ಮಂಗಳೂರು, ದೂರವಾಣಿ ಸಂಖ್ಯೆ 0824 2413205, 0824 2421351, 0824 2425137 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.