
ಕಾರವಾರ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ
Saturday, August 15, 2020
ಕಾರವಾರ - ,ನಗರದ ಬಿಜೆಪಿ ಕಚೇರಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಧ್ವಜಾರೋಹಣ ನೆರವೇರಿಸಿದರು.
ಈ ಸಮಯದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ನಮ್ನ ನೇತಾರರು, ಅನೇಕ ದೇಶಾಭಿಮಾನಿಗಳು ಈ ಹಿಂದೆ ಕಷ್ಟಪಟ್ಟು ಗಳಿಸಿದ ಸ್ವಾತಂತ್ರದ ನೆನಪು ಮಾಡಿ ಕೊಟ್ಟರು. ಈ ಭಾರತ ದೇಶದ ಏಕತೆ ಮತ್ತು ಅಖಂಡತೆಗಾಗಿ ನಾವೆಲ್ಲಾ ಭಾರತೀಯರು ಒಂದಾಗಬೇಕು ಎಂದು ಈ ಮೂಲಕ ಕರೆಕೊಟ್ಟರು. 74 ನೇ ಸ್ವಾತಂತ್ರೋತ್ಸವದ ನಿಮಿತ್ಯ ಬಿಜೆಪಿ ನಾಗರಾಧ್ಯಕ್ಷ ನಾಗೇಶ ಕುರಡೇಕರ, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಜಿಲ್ಲಾ ಕಾರ್ಯದರ್ಶಿ ಮಾಲಾ ಹುಲಸ್ವಾರ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಉದಯ ಬಶೆಟ್ಟಿ ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭಾ ಸದಸ್ಯರು,ಸಾಮಾಜಿಕ ಜಾಲತಾಣದ ಅಧ್ಯಕ್ಷ ಕಿಶನ್ ಕಾಂಬಳೆ, ಹಿರಿಯ ನಾಗರಿಕರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.