-->

ಮಂಗಳೂರು ಅಲ್ಪಸಂಖ್ಯಾತ ಭವನಕ್ಕೆ ಕಲ್ಲೆಸೆತ ಪ್ರಕರಣ: ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿ ಬಂಧನ

ಮಂಗಳೂರು ಅಲ್ಪಸಂಖ್ಯಾತ ಭವನಕ್ಕೆ ಕಲ್ಲೆಸೆತ ಪ್ರಕರಣ: ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿ ಬಂಧನ


(ಗಲ್ಫ್ ಕನ್ನಡಿಗ)ಮಂಗಳೂರು:  ಆ. 13 ರಂದು ತಡರಾತ್ರಿ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

(ಗಲ್ಫ್ ಕನ್ನಡಿಗ)ಮಂಗಳೂರಿನ ಗೂಡುಶೆಡ್ಡೆ ನಿವಾಸಿ ಧನರಾಜ್ ಶೆಟ್ಟಿ (21), ಎಮ್ಮೆಕೆರೆ ನಿವಾಸಿ ಸುಶಾಂತ್ (20), ಕಂದುಕ ನಿವಾಸಿ ಕಾರ್ತಿಕ್ ಶೆಟ್ಟಿ (26), ಹೊಯ್ಗೆಬಝಾರ್ ನಿವಾಸಿಗಳಾದ ಸಾಗರ್ ಬಂಗೇರ (20), ಮನೀಶ್ ಪುತ್ರನ್ (20) ಮತ್ತು  ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

(ಗಲ್ಫ್ ಕನ್ನಡಿಗ)5  ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಅಪ್ರಾಪ್ತ ಬಾಲಕನಿಗೆ ಜಾಮೀನು ದೊರೆತಿದೆ.

(ಗಲ್ಫ್ ಕನ್ನಡಿಗ)ಮಂಗಳೂರು ನಗರದ ಹೃದಯಭಾಗದ ಪಾಂಡೇಶ್ವರದಲ್ಲಿನ ಮೌಲಾನ ಆಝಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಆ.13ರಂದು ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿನ 3 ಕಿಟಕಿಯ ಗಾಜುಗಳನ್ನು ದುಷ್ಕರ್ಮಿಗಳು ಪುಡಿಗೈದಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪೊಲೀಸರು  ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99