
ವಿವಿಧ ತಾತ್ಕಾಲಿಕ ಹುದ್ದೆ ಗಳಿದೆ - ಆ.25 ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಮಂಗಳೂರು :- ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷೆ (ಖಂಖಿ) ನಡೆಸಲು ಅಗತ್ಯವಿರುವ ತಂಡಗಳಿಗೆ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಡಾಟಾ ಎಂಟ್ರಿ ಅಪರೇಟರ್‍ಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕ ಮಾಡಿಕೊಳ್ಳಲು ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್ ಆವರಣ, ನೇತ್ರಾವತಿ ಸಭಾಂಗಣ ನೇರ ಸಂದರ್ಶನ ನಡೆಸಲಾಗುವುದು.
(ಗಲ್ಪ್ ಕನ್ನಡಿಗ)ಹುದ್ದೆಯ ವಿವರ- ಪ್ರಯೋಗ ಶಾಲಾ ತಂತ್ರಜ್ಞರು, ಸಂಖ್ಯೆ- 51, ಮಾಸಿಕ ವೇತನ- ರೂ. 10,000+15/- ಸ್ವಾಬ್ ಕಲೆಕ್ಸನ್, ವಿದ್ಯಾರ್ಹತೆ- ಎಂ.ಎಲ್.ಟಿ./ಡಿ.ಎಂ.ಎಲ್.ಟಿ ಬಿ.ಎಸ್‍ಸಿ.-ಎಂ.ಎಲ್.ಟಿ. ಇವರಿಗೆ ಪ್ರಥಮ ಆದ್ಯತೆ. ನರ್ಸಿಂಗ್/ಅರೆ ವೈದ್ಯಕೀಯ ಪದವೀಧರರು, ಡಿಪ್ಲೋಮೋದಾರರು ಮತ್ತು ವಿಜ್ಞಾನ ಪದವೀಧರರು ಇವರಿಗೆ ಎರಡನೇ ಆದ್ಯತೆ.
(ಗಲ್ಪ್ ಕನ್ನಡಿಗ)ಹುದ್ದೆಯ ವಿವರ- ದತ್ತಾಂಶ ನಮೂದಕರು (ಡಾಟಾ ಎಂಟ್ರಿ ಅಪರೇಟರ್, ಸಂಖ್ಯೆ- 51, ಮಾಸಿಕ ವೇತನ- ರೂ. 14,000/-, ವಿದ್ಯಾರ್ಹತೆ-ಪಿಯುಸಿ ಮತ್ತು 6 ತಿಂಗಳ ಬೇಸಿಕ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.
(ಗಲ್ಪ್ ಕನ್ನಡಿಗ)ಸಲ್ಲಿಸಬೇಕಾದ ದಾಖಲೆಗಳು:- ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗಬೇಕು. (ಈಗಾಗಲೇ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗುವುದು) ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದ.ಕ ಮಂಗಳೂರು ಇಲ್ಲಿನ ಕಚೇರಿ ವೇಳೆಯಲ್ಲಿ ದೂರವಾಣಿ ಮುಖಾಂತರ ಪಡೆಯಬಹುದು ಎಂದು ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆ ತಿಳಿಸಿದೆ.