-->
ads hereindex.jpg
ಮಂಗಳೂರಿನಲ್ಲಿ ‌ಮತ್ತೆ ಕೊರೊನಾಘಾತ; ಒಂದೆ ದಿನ 11 ಮಂದಿ ಸಾವು: 2 ಶತಕ ದಾಟಿದ ಸಾವಿನ‌ ಸಂಖ್ಯೆ

ಮಂಗಳೂರಿನಲ್ಲಿ ‌ಮತ್ತೆ ಕೊರೊನಾಘಾತ; ಒಂದೆ ದಿನ 11 ಮಂದಿ ಸಾವು: 2 ಶತಕ ದಾಟಿದ ಸಾವಿನ‌ ಸಂಖ್ಯೆ(ಗಲ್ಫ್ ಕನ್ನಡಿಗ) ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾರ್ಭಟಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ.

(ಗಲ್ಫ್ ಕನ್ನಡಿಗ)ಜಿಲ್ಲೆಯಲ್ಲಿ ಈವರೆಗೆ ಸಾವನ್ನಪ್ಪಿದ ಸಂಖ್ಯೆಯಲ್ಲಿ ಇಂದು ಅತೀ ಹೆಚ್ಚು ವರದಿಯಾಗಿದೆ. ಈವರೆಗೆ 201 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು  ಸಾವಿನ ಸಂಖ್ಯೆ 2 ಶತಕ ದಾಟಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

(ಗಲ್ಫ್ ಕನ್ನಡಿಗ)ಜಿಲ್ಲೆಯಲ್ಲಿ ಇಂದು ಮಂಗಳೂರು ತಾಲೂಕಿನ 6 ಮಂದಿ, ಬಂಟ್ವಾಳ ತಾಲೂಕಿನ ಇಬ್ಬರು, ಹೊರಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಎಲ್ಲರೂ ಇತರ ಖಾಯಿಲೆಗಳಿಂದಲೂ ಬಳಲುತ್ತಿದ್ದರೂ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

(ಗಲ್ಫ್ ಕನ್ನಡಿಗ)ಜಿಲ್ಲೆಯಲ್ಲಿ ಇಂದು 173 ಮಂದಿಗೆ ಕೊರೊನಾ ದೃಢವಾಗಿದ್ದು ಸೋಂಕಿತರ ಸಂಖ್ಯೆ 6715  ಕ್ಕೆ ಏರಿಕೆಯಾಗಿದೆ. ಇಂದು 107 ಮಂದಿ ಗುಣವಾಗಿದ್ದು   ಒಟ್ಟು 3116 ಮಂದಿ ಗುಣಮುಖರಾಗಿದ್ದಾರೆ. 3398 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ

Ads on article

Advertise in articles 1

advertising articles 2