ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ದಂಡ ಶುಲ್ಕವಿಲ್ಲದೇ ಪರೀಕ್ಷಾ ಶುಲ್ಕ ಪಾವತಿಸಲು ಆಗಸ್ಟ್ 10 ಕೊನೆಯ ದಿನ
Monday, August 3, 2020
ಕರ್ನಾಟಕ
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ
2014-15ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆದ ಬಿ.ಎ., ಎಂ.ಕಾಂ. ಪದವಿಯ ಅಂತಿಮ
ವರ್ಷದ ಹಾಗೂ 2019-20ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆದ ಎಂ.ಎ., ಎಂ.ಕಾಂ. ಪದವಿಯ
ಅಂತಿಮ ವರ್ಷದ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗಾಗಿ ಪರೀಕ್ಷಾ ಶುಲ್ಕ
ಪಾವತಿಸಬೇಕೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ
ನಿರ್ದೇಶಕ ಡಾ. ಸಂಗಮೇಶ್ ಹಿರೇಮಠ್ ಅವರು ತಿಳಿಸಿದ್ದಾರೆ.
2014-15 ನೇ ಸಾಲಿನಲ್ಲಿ ಪ್ರವೇಶ ಪಡೆದ ಅಂತಿಮ ವರ್ಷದ ಬಿ.ಎ. ಬಿ.ಕಾಂ. ಪದವಿಯ ವಿದ್ಯಾರ್ಥಿಗಳಿಗೆ ಪೂರ್ಣ ಪರೀಕ್ಷಾ ಶುಲ್ಕ 950 ರೂ. ಹಾಗೂ 2019-20ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಅಂತಿಮ ವರ್ಷದ ಎಂ.ಎ., ಎಂ.ಕಾಂ. ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 1200 ರೂ.ಗಳು ಹಾಗೂ ಶುಲ್ಕ ವಿನಾಯಿತಿ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 50 ರೂ.ಗಳನ್ನು ನಿಗದಿಪಡಿಸಲಾಗಿದೆ. ದಂಡ ಶುಲ್ಕವಿಲ್ಲದೇ ಪರೀಕ್ಷಾ ಶುಲ್ಕ ಪಾವತಿಸಲು 2020ರ ಆಗಸ್ಟ್ 10 ಕೊನೆಯ ದಿನವಾಗಿದೆ. 200ರೂ.ಗಳ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಆಗಸ್ಟ್ 24 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ವಿಶ್ವವಿದ್ಯಾನಿಲಯದ www.ksoumysuru.ac.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಹಾಗೂ ಪರೀಕ್ಷಾ ಶುಲ್ಕವನ್ನು ಎಲ್ಲ ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು ತೊಂದರೆಯಾದಲ್ಲಿ ಆನ್‍ಲೈನ್ ಸಹಾಯವಾಣಿ ಸಂಖ್ಯೆ 9663482133, 966482311 ಗಳಿಗೆ ಸಂಪರ್ಕಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರಾದೇಶಿಕ ನಿರ್ದೇಶಕರ ಮೊಬೈಲ್ ಸಂಖ್ಯೆ 9916783555 ಅಥವಾ 08472-265868 ಗೆ ಸಂಪರ್ಕಿಸಲು ಕೋರಲಾಗಿದೆ.