ಗ್ರಾ.ಪಂ ಗ್ರಂಥಾಲಯ - ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
Monday, July 27, 2020
(ಗಲ್ಪ್ ಕನ್ನಡಿಗ) ಮಂಗಳೂರು :- ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮ ಪಂಚಾಯತ್ ಹಾಗೂ ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಖಾಲಿ ಇರುವ ಒಂದು ಮೇಲ್ವಿಚಾರಕರ ಸ್ಥಾನವನ್ನು ಗೌರವ ಸಂಭಾವನೆ ಮಾಸಿಕ ರೂ. 7 ಸಾವಿರ ಆಧಾರದ ಮೇಲೆ ಭರ್ತಿ ಮಾಡಲು ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಅದೇ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
(ಗಲ್ಪ್ ಕನ್ನಡಿಗ) ಕೆಮ್ರಾಲ್ ಗ್ರಂಥಾಲಯ ಮೇಲ್ವಿಚಾರಕರ ಸ್ಥಾನವು ಪರಿಶಿಷ್ಟ ಜಾತಿ ಮೀಸಲಾಗಿರುತ್ತದೆ. ಶಿರ್ಲಾಲು ಗ್ರಂಥಾಲಯ ಮೇಲ್ವಿಚಾರಕರ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಇತರೆ ದೃಢೀಕೃತ ದಾಖಲೆಗಳನ್ನು ಆಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಲು ಆಗಸ್ಟ್ 29 ಕೊನೆ ದಿನವಾಗಿದೆ.
(ಗಲ್ಪ್ ಕನ್ನಡಿಗ) ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯತ್ ಅಥವಾ ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಅಥವಾ ದೂರವಾಣಿ ಸಂಖ್ಯೆ; 0824-2441905 ಸಂಪರ್ಕಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.