ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ: ಜಿಲ್ಲಾಧಿಕಾರಿಗೆ ಬಂತು ಬೆಚ್ಚಿ ಬೀಳಿಸುವ ಕರೆ!(ಗಲ್ಪ್ ಕನ್ನಡಿಗ)ಮೈಸೂರು: ಕೊರೊನಾ ಸೋಂಕಿತರು ತಪ್ಪಿಸಲು ಏನೆಲ್ಲ ಉಪಾಯ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಕೊರೊನಾ ಸೋಂಕಿತನೊಬ್ಬ ತಾನು ತಪ್ಪಿಸಿಕೊಳ್ಳುವ ಭರದಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರನ್ನೆ ಬೆಚ್ಚಿ ಬೀಳಿಸಿದ್ದಾನೆ.


(ಗಲ್ಪ್ ಕನ್ನಡಿಗ)ಮೈಸೂರಿನ ಜಿಲ್ಲಾಧಿಕಾರಿಗೆ ಇಂದು ಕೋವಿಡ್ ಕಂಟ್ರೋಲ್ ರೂಂ ನಿಂದ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕರಿಗೆ ಅತ್ತ ಕಡೆಯಿಂದ ನಿಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಕ್ವಾರಂಟೈನ್ ಗೆ ಒಳಗಾಗಿ ಎಂದು ಹೇಳಲಾಯಿತು. ಈ ಕರೆಗೆ ಬೆಚ್ಚಿ ಬಿದ್ದ ಜಿಲ್ಲಾಧಿಕಾರಿಗಳು ಕಂಟ್ರೋಲ್ ರೂಂ ಗೆ ತಾನು ಜಿಲ್ಲಾಧಿಕಾರಿ ಎಂಬುದನ್ನು ತಿಳಿಸಿದ್ದಾರೆ.


(ಗಲ್ಪ್ ಕನ್ನಡಿಗ)ಕೊರೊನಾ ಪರೀಕ್ಷೆಗೆ ಒಳಗಾದ ವ್ಯಕ್ತಿ ತಪ್ಪಿಸಿಕೊಳ್ಳಲು ಜಿಲ್ಲಾಧಿಕಾರಿ ನಂಬರ್ ನ್ನು ಅಧಿಕಾರಿಗಳಿಗೆ ಕೊಟ್ಟದ್ದು ಈ ಎಡವಟ್ಟಿಗೆ ಕಾರಣ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು ಮತ್ತು ಸೂಕ್ತ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ