ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ವರ್ಷದ ಯುವತಿ ಸಹಿತ ಕೊರೊನಾಗೆ ಇಂದು 4 ಮಂದಿ ಬಲಿ
Tuesday, July 28, 2020
(ಗಲ್ಫ್ ಕನ್ನಡಿಗ) ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 25 ವರ್ಷದ ಯುವತಿ ಸಹಿತ ಇಂದು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದ 84 ವರ್ಷದ ವ್ಯಕ್ತಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 72 ವರ್ಷದ ವ್ಯಕ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 25 ವರ್ಷದ ಯುವತಿ, 62 ವರ್ಷದ ಗಂಡಸು ಮೃತಪಟ್ಟವರು.
(ಗಲ್ಫ್ ಕನ್ನಡಿಗ) ಮೃತಪಟ್ಟ 25 ವರ್ಷದ ಯುವತಿ ಜುಲೈ 25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರು brain stem dysfunction, cortical venous thrombosis, infra parenchymal bleed ನಿಂದ ಬಳಲುತ್ತಿದ್ದರು. ಕೊರೊನಾ ಸೋಂಕಿತ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 135 ಕ್ಕೇ ಏರಿಕೆಯಾಗಿದೆ.
(ಗಲ್ಫ್ ಕನ್ನಡಿಗ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 173 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5103 ಆಗಿದೆ. ಇಂದು 41 ಮಂದಿ ಗುಣಮುಖರಾಗಿದ್ದು 2338 ಮಂದಿ ಈವರೆಗೆ ಗುಣಮುಖವಾಗಿದ್ದಾರೆ. 2632 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.