April Festival List 2026: ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
**ಏಪ್ರಿಲ್ 2026: ಹನುಮ ಜಯಂತಿಯಿಂದ ನರಸಿಂಹ ಜಯಂತಿ ತನಕ, ಪ್ರಮುಖ ಹಬ್ಬಗಳ ಸಂಪೂರ್ಣ ಮಾಹಿತಿ**
ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ಅನೇಕ ಹಬ್ಬ ಹರಿದಿನಗಳು ಮತ್ತು ವ್ರತಾಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅದರಂತೆ, 2026ರ ಏಪ್ರಿಲ್ ತಿಂಗಳು ಹಲವು ಮಹತ್ವದ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಲಿದೆ. ಹನುಮ ಜಯಂತಿ, ಅಕ್ಷಯ ತೃತೀಯ, ಬಸವೇಶ್ವರ ಜಯಂತಿ, ಮತ್ತು ನರಸಿಂಹ ಜಯಂತಿಯಂತಹ ಪ್ರಮುಖ ದಿನಗಳು ಈ ತಿಂಗಳಲ್ಲಿ ಬರಲಿವೆ. ಭಕ್ತರಿಗೆ ಅನುಕೂಲವಾಗುವಂತೆ ಏಪ್ರಿಲ್ ತಿಂಗಳ ಸಂಪೂರ್ಣ ಹಬ್ಬಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
2026ರ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಮತ್ತು ವ್ರತಾಚರಣೆಗಳ ವಿವರ ಹೀಗಿದೆ:
ಏಪ್ರಿಲ್ 02ರಂದು ಹನುಮಜಯಂತಿ ಹಾಗೂ ಪೂರ್ಣಿಮಾ ಆಚರಣೆಗಳು ಇವೆ. ಅಂದೇ ಚೈತ್ರ ಕೃಷ್ಣ ಪಕ್ಷ ಆರಂಭವಾಗಲಿದ್ದು, ಏಪ್ರಿಲ್ 03ರಂದು ಕ್ರೈಸ್ತರ ಪವಿತ್ರ ಹಬ್ಬ ಗುಡ್ ಫ್ರೈಡೇ ಆಚರಣೆ ನಡೆಯಲಿದೆ. ಏಪ್ರಿಲ್ 04ರಂದು ಈಸ್ಟರ್ ಶನಿವಾರ ಹಾಗೂ ಏಪ್ರಿಲ್ 05ರಂದು ಸಂಕಷ್ಟಹರ ಚತುರ್ಥಿ ಇರಲಿದೆ.
ತಿಂಗಳ ಎರಡನೇ ವಾರದಲ್ಲಿ ಏಪ್ರಿಲ್ 11ಕ್ಕೆ ವೃಷಭ ಜಯಂತಿ, ಏಪ್ರಿಲ್ 13ಕ್ಕೆ ವಲ್ಲಭಾಚಾರ್ಯ ಜಯಂತಿ ಹಾಗೂ ಸರ್ವೈಕಾದಶಿ ವರೂಥಿನಿ ಆಚರಿಸಲಾಗುತ್ತದೆ. ಏಪ್ರಿಲ್ 14ರಂದು ಮೇಷ ಸಂಕ್ರಮಣವಿದ್ದರೆ, ಏಪ್ರಿಲ್ 15ರಂದು ಸೌರಯುಗಾದಿ (ವಿಷು), ಪ್ರದೋಷ ಮತ್ತು ಮಾಸ ಶಿವರಾತ್ರಿ ಹಬ್ಬಗಳು ಸಾಲುಗಟ್ಟಿ ಬರಲಿವೆ.
ಏಪ್ರಿಲ್ 17ರಂದು ಅಮಾವಾಸ್ಯಾ ಹಾಗೂ ಏಪ್ರಿಲ್ 18ರಂದು ವೈಶಾಖ ಶುಕ್ಲಪಕ್ಷ ಆರಂಭವಾಗಲಿದೆ. ಏಪ್ರಿಲ್ 19ಕ್ಕೆ ಪರಶುರಾಮ ಜಯಂತಿ, ಏಪ್ರಿಲ್ 20ರಂದು ಬಸವೇಶ್ವರ ಜಯಂತಿ ಹಾಗೂ ಅಕ್ಷಯ ತೃತೀಯದಂತಹ ಮಹತ್ವದ ಆಚರಣೆಗಳಿವೆ. ಏಪ್ರಿಲ್ 21ರಂದು ಶಂಕರಾಚಾರ್ಯ ಜಯಂತಿ ಮತ್ತು ವಿಜಯ ಧ್ವಜಾಚಾರ್ಯ ಪುಣ್ಯತಿಥಿ ಇರಲಿದೆ.
ಏಪ್ರಿಲ್ 22ಕ್ಕೆ ರಾಮಾನುಜಾಚಾರ್ಯ ಜಯಂತಿ ಹಾಗೂ ಏಪ್ರಿಲ್ 23ಕ್ಕೆ ಗಂಗೋತ್ಪತ್ತಿ ಹಬ್ಬವಿದೆ. ತಿಂಗಳ ಕೊನೆಯ ವಾರದಲ್ಲಿ ಏಪ್ರಿಲ್ 27ರಂದು ಮಹಾನಕ್ಷತ್ರ ಭರಣಿ ಮತ್ತು ಸರ್ವೈಕಾದಶಿ ಮೋಹಿನಿ ಆಚರಿಸಲಾಗುತ್ತದೆ. ಏಪ್ರಿಲ್ 28ರಂದು ವೇದ ವ್ಯಾಸ ಜಯಂತಿ ಹಾಗೂ ಪ್ರದೋಷವಿದ್ದು, ಏಪ್ರಿಲ್ 30ರಂದು ನರಸಿಂಹ ಜಯಂತಿಯೊಂದಿಗೆ ಏಪ್ರಿಲ್ ತಿಂಗಳ ಹಬ್ಬಗಳ ಸರಣಿ ಸಮಾಪ್ತಿಗೊಳ್ಳಲಿದೆ.