Header Ad

UDUPI : ಇಂಜಿನಿಯರ್ ಮನೆಯಲ್ಲಿ ರಾಶಿ ರಾಶಿ ಚಿನ್ನಾಭರಣ..!

ಉಡುಪಿಯಲ್ಲಿ ಎಸಿಬಿ ದಾಳಿ ನಡೆದಿದ್ದು ಸಣ್ಣ ನೀರಾವರಿ ಇಲಾಖೆ ಸಹಾಯಕ  ಇಂಜಿನಿಯರ್ ಮನೆಯಲ್ಲಿ ರಾಶಿ ರಾಶಿ ಚಿನ್ನಾಭರಣಗಳು ಪತ್ತೆಯಾಗಿದೆ. ದಾಳಿಯ ಫೋಟೋಗಳು ಲಭ್ಯವಾಗಿದ್ದು, ಭಾರೀ ಪ್ರಮಾಣದ ಚಿನ್ನಾಭರಣಗಳ ಜೊತೆಗೆ ನಗದು ಕೂಡ ಪತ್ತೆಯಾಗಿದೆ. ಸಣ್ಣ ನೀರಾವರಿ ಇಲಾಖೆ ಅಸಿಸ್ಟೆಂಟ್ ಇಂಜಿನಿಯರ್  ಹರೀಶ್ ಅವರ ನಿವಾಸ ಉಡುಪಿಯ ಕೊರಂಗ್ರಪಾಡಿಯಲ್ಲಿದೆ.ಇಲ್ಲಿರುವ ನಿವಾಸಕ್ಕೆ ದಾಳಿ‌ ನಡೆಸಿದ  ಅಧಿಕಾರಿಗಳು ಮನೆಯೊಳಗೆ ಜಾಲಾಡಿದ್ದಾರೆ. ಈ ವೇಳೆ ಎಸಿಬಿ ಡಿವೈಎಸ್ ಪಿ ಮಂಜುನಾಥ ಕವರಿ ನೇತೃತ್ವದ ತಂಡಕ್ಕೆ ಭಾರೀ ಪ್ರಮಾಣದ ಸಂಪತ್ತು ಮತ್ತು ದಾಖಲೆಗಳು ಸಿಕ್ಕಿವೆ.
ಇತ್ತೀಚಿನ ಸುದ್ದಿಗಳು