Night ಕುಡಿದ ಮತ್ತಿನಲ್ಲಿ ಈ ಮಹಿಳೆಯರಿಬ್ಬರು ನಡುರಸ್ತೆಯಲ್ಲೇ ಮಾಡಿದ್ದೇನು?
Thursday, March 24, 2022
ಬೆಳಗಾವಿ: ನನ್ನ ಏರಿಯಾಗೆ ನೀನ್ಯಾಕೆ ಬಂದೆ ಎಂದು ಪರಸ್ಪರ ಅವಾಚ ಶಬ್ಧಗಳಿಂದ ನಿಂದಿಸಿಕೊಂಡು, ಜುಟ್ಟು ಹಿಡಿದು ಮಹಿಳೆಯರಿಬ್ಬರು ನಡು ರಸ್ತೆಯಲ್ಲೇ ಗಲಾಟೆ ಮಾಡಿದ್ದಾರೆ.
ಘಟನೆ ನಡೆದಿರುವುದು ಬೆಳಗಾವಿ ನಗರದ ಖಡೇಬಜಾರ್ನಲ್ಲಿ.
ಬಳಿಕ ಮಹಿಳಾ ಮತ್ತು ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟು ಮಹಿಳೆಯರ ಗಲಾಟೆ ನಿಯಂತ್ರಿಸಿದ್ದಾರೆ. ಬೆಳಗಾವಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇವರು ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಸದ್ಯ ಇವರ ಜಡೆಜಗಳ ವೀಡಿಯೋ ವೈರಲ್ ಆಗಿದೆ.