
Sorry ಮಾತೆರೆಗ್ಲ, ಆನ್ ಲೈನ್ ಲೋನ್ ದಕ್ಲೆನ ಕಾಲ್ ಬತ್ತ್ಂಡ ಸೈತೆ ಪನ್ಲೆ- ಡೆತ್ ನೋಟ್ ಬರೆದು ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ
Monday, January 10, 2022
ಮಂಗಳೂರು: Sorry ಮಾತೆರೆಗ್ಲ, ಆನ್ ಲೈನ್ ಲೋನ್ ದಕ್ಲೆನ ಕಾಲ್ ಬತ್ಂಡ ಸೈತೆ ಪನ್ಲೆ ಎಂದು ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹೊರವಲಯದ ಕಿನ್ನಿಗೋಳಿಯ 26 ವರ್ಷದ ಯುವಕ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಕುಳಾಯಿಯ ಸನ್ ರೈಸ್ ಕಾರ್ಪೊರೇಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ತಂದೆ ತಾಯಿ 15 ವರ್ಷಗಳ ಹಿಂದೆಯೆ ಮೃತಪಟ್ಟಿದ್ದರು. ಇವರು ಓರ್ವ ಅಣ್ಣನ ಜೊತೆಗೆ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಆನ್ ಲೈನ್ ನಲ್ಲಿ ಸಾಲ ಪಡೆದಿದ್ದ ಅವರು ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಇವರು ಡೆತ್ ನೋಟ್ ಬರೆದಿದ್ದು ಅದರಲ್ಲಿ sorry ಮಾತೆರೆಗ್ಲ, ಎಂಕ್ ಏರೆನೆಲ ನಂಬಿಕೆ ಒರಿಪಾಯೆರೆ ಆಯಿಜಿ. ಕಾಸ್ ದ ವಿಷಯಡ್ ತೊಂದರೆ ಆಂಡ್. Sorry, online ದ loan ದಕುಲು ಕಾಲ್ ಮಲ್ತೆರ್ಂಡ death ಆತೆ ಪನ್ಲೆ. Really sorry for all ಎಂದು ಬರೆದಿದ್ದಾರೆ.
ಇದೇ ರೀತಿ ಪತ್ರ ಬರೆದು ಉಡುಪಿ ಯಲ್ಲಿ ಇತ್ತೀಚೆಗೆ ಓರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು.