-->

ಕಾಂಚನಾ-3 ಸಿನಿಮಾ ನಟಿಯ ಮೃತದೇಹ ಪತ್ತೆ..! ಇದು ಕೊಲೆಯೋ.. ಆತ್ಮಹತ್ಯೆಯೋ..

ಕಾಂಚನಾ-3 ಸಿನಿಮಾ ನಟಿಯ ಮೃತದೇಹ ಪತ್ತೆ..! ಇದು ಕೊಲೆಯೋ.. ಆತ್ಮಹತ್ಯೆಯೋ..

ಹೈದರಾಬಾದ್​: 24 ವರ್ಷದ ನಟಿಯ ಮೃತದೇಹ ಗೋವಾದ ಅಪಾರ್ಟ್​ಮೆಂಟ್​​ವೊಂದರಲ್ಲಿ ಪತ್ತೆಯಾಗಿದೆ.

ರಷ್ಯಾ ಮೂಲದ ನಟಿ ಅಲೆಕ್ಸಾಂಡ್ರಾ ಕಾಂಚನಾ-3 ಸೇರಿದಂತೆ ಅನೇಕ ತಮಿಳು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇವರು ಗೋವಾದ ಅಪಾರ್ಟ್​ಮೆಂಟ್​ವೊಂದರಲ್ಲಿ ತನ್ನ ಬಾಯ್​ಫ್ರೆಂಡ್ ಜೊತೆ ವಾಸವಾಗಿದ್ದರು. 

ಇತ್ತೀಚಿನ ದಿನಗಳಲ್ಲಿ ನಟಿ ಖಿನ್ನತೆಗೊಳಗಾಗಿದ್ದ ಕಾರಣ ಸ್ನೇಹಿತ ಆಕೆಯನ್ನು ಬಿಟ್ಟು ಹೋಗಿದ್ದ. ಇದರ ಬೆನ್ನಲ್ಲೇ ನಟಿಯ ಮೃತದೇಹ ಪತ್ತೆಯಾಗಿದೆ.  ಅಷ್ಟೇ ಅಲ್ಲದೆ ನಟಿ ಅಲೆಕ್ಸಾಂಡ್ರಾ ಚೆನ್ನೈ ಮೂಲದ ಫೋಟೋಗ್ರಾಪರ್​ ಒಬ್ಬನ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಮಾಡಿ, ದೂರು ದಾಖಲು ಮಾಡಿದ್ದರು. ಈ ವೇಳೆ ಆತನ ಬಂಧನ ಮಾಡಲಾಗಿತ್ತು. ಆದರೆ, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆ ನಂತರ ಬಹಿರಂಗಗೊಳ್ಳಬೇಕಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99