ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಸೌರವ್ ಗಂಗೂಲಿ ಹಾಗೂ ನಗ್ಮಾ ಲವ್ ಬ್ರೇಕಪ್ಗೆ ಅಸಲಿ ಕಾರಣ ಇಲ್ಲಿದೆ ನೋಡಿ..

 ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ನಟಿ ನಗ್ಮಾ ಇವರಿಬ್ಬರ ಬ್ರೇಕಪ್ ಆಗಲು ಅಸಲಿ ಕಾರಣವೇನಬುದು ಇಲ್ಲಿದೆ ನೋಡಿ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ನಟಿ ನಗ್ಮಾ2000 ದಶಕದ ಆರಂಭದಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಅಷ್ಟರಲ್ಲಾಗಲೇ ಗಂಗೂಲಿ ಜನಪ್ರಿಯ ಡ್ಯಾನ್ಸರ್​ ಡೊನಾ ಗಂಗೂಲಿಯನ್ನು ಮದುವೆಯಾಗಿದ್ದರು. 

ಸಂದರ್ಶನವೊಂದರಲ್ಲಿ, ಅವರ ಬ್ರೇಕಪ್​ ಹಿಂದಿನ ಕಾರಣದ ಬಗ್ಗೆ ಮಾತನಾಡುತ್ತಾ, “ಬೇರೆ ವಿಷಯಗಳಲ್ಲದೆ ವೃತ್ತಿಜೀವನದ ಅಪಾಯವನ್ನು ಎದುರಿಸಬೇಕಾದ್ದರಿಂದ ಬ್ರೇಕಪ್​ ಮಾಡಿಕೊಳ್ಳಬೇಕಾಯಿತು. ಬಹಳಷ್ಟು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಹೀಗಾಗಿ ಬ್ರೇಕಪ್​ ಅನಿವಾರ್ಯ ಆಗಿತ್ತು ಎಂದಿದ್ದರು. ಗಂಗೂಲಿಯ ಕಳಪೆ ಸಾಧನೆಗಾಗಿ ಜನರು ಅವಳನ್ನು ದೂಷಿಸಲು ಪ್ರಾರಂಭಿಸಿದರು ಎಂದು ನಗ್ಮಾ ಬಹಿರಂಗಪಡಿಸಿದರು. ನೀವು ಬೇರೊಬ್ಬರ ಜೀವನವನ್ನು ದುಃಖಕ್ಕೆ ದೂಡುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ, ಮುಂದುವರಿಯುವುದು ಉತ್ತಮವಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW