ಆನ್ ಲೈನ್ ಕ್ಲಾಸ್ ಗೆ ನೀಡಿದ ಮೊಬೈಲ್ ನಲ್ಲಿ ಅಪ್ಪನದೆ ಪೋಲಿ ವಿಡಿಯೋ ನೋಡಿದ ಮಗಳು!. ಮುಂದೇನಾಯಿತೆಂದರೆ..
(ಗಲ್ಪ್ ಕನ್ನಡಿಗ)ಆನ್ಲೈನ್ ಕ್ಲಾಸ್ಗೆ ತನ್ನ ಮಗಳಿಗೆ ತಂದೆ ಕುಮಾರ್ ಎಂಬಾತ ಮೊಬೈಲ್ ನೀಡಿ ಪಜೀತಿಗೊಳಗಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ.
(ಗಲ್ಪ್ ಕನ್ನಡಿಗ)ಮಗಳಿಗೆ ಈತ ತನ್ನ ಮೊಬೈಲನ್ನು ಆನ್ ಲೈನ್ ಕ್ಲಾಸ್ ನಲ್ಲಿ ಭಾಗವಹಿಸಲೆಂದು ಮಗಳಿಗೆ ನೀಡಿದ್ದ. ಆನ್ ಲೈನ್ ಕ್ಲಾಸ್ ಮುಗಿದ ನಂತರ ಮಗಳು ಮೊಬೈಲ್ ನ್ನು ತನ್ನಲೆ ಇರಿಸಿಕೊಂಡು ಅದರಲ್ಲಿದ್ದ ವಿಡಿಯೋವನ್ನು ನೋಡುತ್ತಿದ್ದಳು. ಹೀಗೆ ನೋಡುತ್ತಿದ್ದಾಗ ವಿದ್ಯಾರ್ಥಿನಿಗೆ ತನ್ನ ತಂದೆ ಪರಸ್ತ್ರೀಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ನೋಡಿ ಶಾಕ್ ಗೊಳಗಾಗಿದ್ದಾಳೆ.
(ಗಲ್ಪ್ ಕನ್ನಡಿಗ)ಪರಸ್ತ್ರೀ ಜೊತೆ ಅಪ್ಪನ ರಾಸಲೀಲೆ ನೋಡಿದ ಈಕೆ ವಿಡಿಯೋವನ್ನು ತಾಯಿಗೂ ತೋರಿಸಿದ್ದಾಳೆ. ತಾಯಿಯು ಈ ವಿಡಿಯೋವನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ. ತನ್ನ ಗಂಡ ಪರಸ್ತ್ರೀ ಯೊಂದಿಗೆ ರಾಸಲೀಲೆ ಯಲ್ಲಿ ತೊಡಗಿರುವ ದೃಶ್ಯವನ್ನು ನೋಡಿದ ಈಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
(ಗಲ್ಪ್ ಕನ್ನಡಿಗ)ಆನ್ಲೈನ್ ಕ್ಲಾಸ್ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಂದೆ ಕುಮಾರ್ ಮಗಳಿಗೆ ತನ್ನ ಮೊಬೈಲ್ ನೀಡಿದ್ದಾನೆ. ಪತಿ ಮಾಡಿದ ಅನ್ಯಾಯವನ್ನು ಸಹಿಸದ ಪತ್ನಿ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಈ ವಿಡಿಯೋ ದಂಪತಿಗಳ ದಾಂಪತ್ಯದಲ್ಲಿ ಬಿರುಕು ಮೂಡಿಸಿದೆ
(ಗಲ್ಪ್ ಕನ್ನಡಿಗ)