ಮಗುವೊಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೊಂಡದ ನೀರಿಗೆ ಬಿದ್ದು ಮೃತಪಟ್ಟ ಉಡುಪಿಯ ಹೆಬ್ರಿಯ ನಾಲ್ಕೂರು ರಮನೆ ಜೆಡ್ಡು ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಕೃತಿಕಾ (3) ಸಾವನ್ನಪ್ಪಿದ ಮಗು.
ಕೃತಿಕಾ ಅಜ್ಜಿಯೊಂದಿಗೆ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಕಜ್ಕೆ ದೊಡ್ಡಮನೆ ಹೊಂಡದ ಕಂಠದಲ್ಲಿ ಮೊಮ್ಮಕ್ಕಳೊಂದಿಗೆ ನಡೆದುಕೊಂದು ಹೋಗುತ್ತಿರುವಾಗ ಮೊಮ್ಮಗಳು ಕೃತಿಕಾ (3 ವರ್ಷ) ರವರು ಆಕಸ್ಮಿಕವಾಗಿ ಕಾಲು ಜಾರಿ ಹೊಂಡದ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.