ಮೃತರನ್ನು ಭಾನುಪ್ರಿಯಾ ( 21) ಮತ್ತು ಆಕೆಯ ಎರಡು ವರ್ಷದ ಮಗಳು ನಿಧಿ ಎಂದು ಗುರುತಿಸಲಾಗಿದೆ. ಭಾನುಪ್ರಿಯಾ ಇದೇ ಗ್ರಾಮದ ಹರೀಶ್ ಕುಮಾರ್ ಎಂಬಾತನನ್ನ ಕಳೆದ ಮೂರು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಈ ಮಧ್ಯೆ ಕುಟುಂಬದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು, ಇದರಿಂದ ಮನನೊಂದು ಮಗುವನ್ನ ನೇಣಿಗೆ ಹಾಕಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಸಂಭಂದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.