-->

ಲವ್ ಪ್ರಪೋಸ್ ನಿರಾಕರಣೆ: ಯುವತಿಯನ್ನು ಕೊಂದ ಪಾಗಲ್ ಪ್ರೇಮಿ!!

ಲವ್ ಪ್ರಪೋಸ್ ನಿರಾಕರಣೆ: ಯುವತಿಯನ್ನು ಕೊಂದ ಪಾಗಲ್ ಪ್ರೇಮಿ!!


ಮಲಪ್ಪುರಂ (ಕೇರಳ) : ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೋರ್ವ  ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ  ಘಟನೆ ಕೇರಳದಲ್ಲಿ ನಡೆದಿದೆ. 


ಮಲಪ್ಪುರಂ ಎಲನಾಡ್​ನ ನಿವಾಸಿ ದೃಶ್ಯಾ(21) ಎಂದು ಗುರುತಿಸಲಾಗಿದೆ.ಆರೋಪಿ ವಿನೇಶ್​ ವಿನೋದ್​ನನ್ನು (21) ವಶಕ್ಕೆ ಪಡೆದುಕೊಂಡಿದ್ದಾರೆ. ವಿನೇಶ್​ ಯುವತಿಯ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಾಕುವಿನಿಂದ ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹಲ್ಲೆ ತಡೆಯಲು ಮುಂದಾದ ದೃಶ್ಯಾಳ ಸಹೋದರಿ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 8:30ರ ವೇಳೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99