ಕಾಲ್ ಗರ್ಲ್ ಜೊತೆಗೆ ರಾತ್ರಿ ಕಳೆದು 97 ಸಾವಿರ ಕಳೆದುಕೊಂಡ!
Wednesday, November 18, 2020
(ಗಲ್ಫ್ ಕನ್ನಡಿಗ)ಬೆಂಗಳೂರು: ಆನ್‌ಲೈನ್ ಜಾಹೀರಾತು ನೋಡಿದ ಬೆಂಗಳೂರಿನ ವ್ಯಕ್ತಿಯೊಬ್ಬ ಕಾಲ್‌ಗರ್ಲ್ ಜೊತೆಗೆ ರಾತ್ರಿ ಕಳೆದು 97 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.ಈ ಬಗ್ಗೆ ಬೆಂಗಳೂರು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)ಮೊಬೈಲ್ ಆ್ಯಪ್ ಒಂದರಲ್ಲಿ ಕಾಲ್‌ಗರ್ಲ್ ಸಿಗುವುದಾಗಿ ಜಾಹೀರಾತು ನೋಡಿ ಈತ ಕರೆ ಮಾಡಿದ್ದ .ಆಕೆಯನ್ನು ಮನೆಗೆ ಕರೆಸಿಕೊಳ್ಳಲು 10 ಸಾವಿರ ಮುಂಗಡವಾಗಿ ಪಾವತಿಸಿದ್ದ.
ಮಹಿಳೆಯೊಬ್ಬರನ್ನು ಮನೆಗೆ ಕರೆಸಿಕೊಂಡು ರಾತ್ರಿ ಕಳೆದಿದ್ದ. ರಾತ್ರಿ ಈತನ ಜೊತೆಗೆ ಕಳೆದ ಈಕೆ ತಾನೊಂದು ಸ್ವಯಂಸೇವಾ ಸಂಘಟನೆ ನಡೆಸುತ್ತಿರುವುದಾಗಿ ಹೇಳಿದ್ದಳು. ಆ ಸಂಘಟನೆಗೆ ಹಣವನ್ನು ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಈತನಿಗೆ ಬೆದರಿಸಿದ್ದಳು.
(ಗಲ್ಫ್ ಕನ್ನಡಿಗ)ಅಷ್ಟು ಮಾತ್ರವಲ್ಲದೆ ಆಕೆಯ ಮೆನೆಜರ್ ನೆಂದು ಕರೆ ಮಾಡಿದ್ದ ಮತ್ತೊಬ್ಬ ಆರೋಪಿ ಸಹ ಈತನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಹೆದರಿದ ಈತ ಅವರು ನೀಡಿದ್ದ ಖಾತೆಗೆ 97 ಸಾವಿರ ಹಾಕಿದ್ದಾನೆ.
(ಗಲ್ಫ್ ಕನ್ನಡಿಗ)ಹಣ ಕಳುಹಿಸಿದ ಬಳಿಕ ಮಹಿಳೆ ನಾಪತ್ತೆಯಾಗಿದ್ದು ಮೊಬೈಲ್ ನಂಬರ್ ಆಧರಿಸಿ ಪೊಲೀಸರು ಆಕೆಯನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
(ಗಲ್ಫ್ ಕನ್ನಡಿಗ)ಹಣ ಕಳೆದುಕೊಂಡ ಬಗ್ಗೆ ಖಾಸಗಿ ಕಂಪನಿಯ ಉದ್ಯೋಗಿ ಯೊಬ್ಬರು ದೂರು ನೀಡಿದ್ದು ಅಪರಿಚಿತ ಮಹಿಳೆ ಹಾಗೂ ಆಕೆಯ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಿಕೊ ಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)