STATE

UDUPI : ವಿದ್ಯಾರ್ಥಿಗಳ ಅಪಹರಣ ; ನಾಲ್ವರ ಬಂಧನ

ರಾತ್ರಿ ವೇಳೆ ಕ್ಯಾಟರಿಂಗ್  ಮುಗಿಸಿ,  ಮಣಿಪಾಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ತಂಡವೊಂದು ಅಪಹರಣ ಮಾಡಿ, ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 


ವಿದ್ಯಾರ್ಥಿಗಳಾದ ಬ್ರೈಟಿಲ್ ಬಿಜು ಮತ್ತು ಮಹಮ್ಮದ್ ಸಿನಾನ್‌, ಖಾಸಗಿ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇದೇ ಮಾರ್ಗವಾಗಿ ಬಂದ KA -01-MA-5287 ನೋಂದಣಿ ಸಂಖ್ಯೆಯ ಕಾರನ್ನು ಕೈ ತೋರಿಸಿ ಡ್ರಾಪ್ ಕೇಳಿದ್ದಾರೆ.  ಆದರೆ ಕಾರಿನಲ್ಲಿ ಇದ್ದವರನ್ನು ನೋಡಿ, ಕಾರಿನಲ್ಲಿ ತೆರಳಲು  ನಿರಾಕರಿಸಿದ್ದಾರೆ. ಆಗ ಕಾರಿನಲ್ಲಿದ್ದವರು ಇಳಿದು ಚೂರಿಯನ್ನು ತೋರಿಸಿ, ಕಾರಿನಲ್ಲಿ ಕುಳಿತುಕೊಳ್ಳದೇ ಇದ್ದರೇ ಕೊಲ್ಲುವುದಾಗಿ ಬೆದರಿಸಿ, ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿದ್ದಾರೆ. ನಂತರ  ಇಬ್ಬರಿಗೆ ಹಲ್ಲೆ ನಡೆಸಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಒಬ್ಬಾತ ತಪ್ಪಿಸಿಕೊಂಡು ಬಂದು ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕಾಪು, ಶಿರ್ವದಲ್ಲಿ ಸುತ್ತಾಡಿಸಿ ಕಾರಿನಲ್ಲೇ ಹಲ್ಲೆ ನಡೆಸಿದ್ದಾರೆ. ಶಿರ್ವ ಬಳಿ ಪೋಲಿಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯಾಗ್‌ಗಳು: STATE