Header Ad

Mangalore ಯುನಿಸೆಕ್ಸ್ ಸೆಲೂನ್ ನಲ್ಲಿ ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆ- ಆರೋಪಿ ಅಂದರ್! (CCTV VIDEO)


ಮಂಗಳೂರು; ಮಂಗಳೂರಿನ ಕದ್ರಿಯಲ್ಲಿ ಯುನಿಸೆಕ್ಸ್ ಸೆಲೂನ್ ವೊಂದರಲ್ಲಿ ಯುವತಿಯ ಮೈಗೆ ಕೈ ಹಾಕಿ ದರೋಡೆ ಕೃತ್ಯ‌ ಎಸಗಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.



ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಎಂಬಾತನ ಬಂಧಿತ ಆರೋಪಿ. ಈತ ಯೂನಿಸೆಕ್ಸ್ ಸೆಲೂನ್ ಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ.ಕದ್ರಿ ಯಲ್ಲಿರುವ ಬ್ಲಿಸ್ ಸಿಗ್ನೇಚರ್ ಯುನಿಸೆಕ್ಸ್ ಸೆಲೂನ್ ನಲ್ಲಿ ಜುಲೈ 1 ರಂದು ಈ ಘಟನೆ ನಡೆದಿತ್ತು.

ಯುವತಿಯ ಮೈಗೆ ಹಾಕಿ ಕಿರುಕುಳ ನೀಡಿದ್ದ ದಾವೂದ್ ಆಕೆಗೆ  ಹಲ್ಲೆ ನಡೆಸಿ 14 ಸಾವಿರ ರೂ. ದರೋಡೆ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇತ್ತೀಚಿನ ಸುದ್ದಿಗಳು