-->

ಭಾರತದಲ್ಲಿ ಬಿಕಿನಿ  ಧರಿಸಿದ ಮೊದಲ ನಟಿ ಯಾರು ಗೊತ್ತಾ? ಈಕೆಯ ನಿರ್ಧಾರಕ್ಕೆ ಬೆಚ್ಚಿಬಿದ್ದಿದ್ದರು ಪೊಟೋ ಗ್ರಾಫರ್!

ಭಾರತದಲ್ಲಿ ಬಿಕಿನಿ ಧರಿಸಿದ ಮೊದಲ ನಟಿ ಯಾರು ಗೊತ್ತಾ? ಈಕೆಯ ನಿರ್ಧಾರಕ್ಕೆ ಬೆಚ್ಚಿಬಿದ್ದಿದ್ದರು ಪೊಟೋ ಗ್ರಾಫರ್!ಇತ್ತೀಚೆಗೆ ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಳ್ಳುವುದು ಕೆಲ ಚಿತ್ರನಟಿಯರಿಗೆ ದೊಡ್ಡ ವಿಷಯವೇನಲ್ಲ. ಬಿಕಿನಿ ಧರಿಸುವ ಮೂಲಕ ಪಡ್ಡೆಯುಡುಗರ ಮನ ಬೆಚ್ಚಗಾಗಿಸುವ ನಟಿಯರು ಆ ಮೂಲಕ ಖ್ಯಾತಿಗೆ ಹಂಬಲಿಸುತ್ತಾರೆ.

ಆದರೆ ಸಂಪ್ರದಾಯವಾದಗಳಿಗೆ ತಿಲಾಂಜಲಿ ಇಟ್ಟು ಭಾರತದಲ್ಲಿ ಮೊದಲು ಬಿಕಿನಿ ಧರಿಸಿದ ನಟಿ  ಶರ್ಮಿಳಾ ಟ್ಯಾಗೋರ್. 1960 ರಲ್ಲಿ ಮ್ಯಾಗಜೀನ್ ವೊಂದರ ಮುಖಪುಟಕ್ಕಾಗಿ ಆಕೆ ಬಿಕಿನಿ ಧರಿಸಿದ್ದರು. ಆಕೆಯ ಬಿಕಿನಿ ಪೊಟೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಶರ್ಮಿಳಾ ಟ್ಯಾಗೋರ್ ಅವರನ್ನು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಬಾಲಿವುಡ್ ಗೆ ಪರಿಚಯಿಸಿದ್ದರು.ಕಾಶ್ಮೀರ ಕಿ ವಾಲಿ, ಆರಾಧನ, ಚುಪ್ಕೆ ಚುಪ್ಕೆ, ಅಮರ್ ಪ್ರೇಮ್ ಸಿನಿಮಾಗಳಲ್ಲಿ ಈಕೆ ನಟಿಸಿದ್ದರು‌. ಆದರೆ ಈಕೆ ಪ್ರಸಿದ್ದಿಗೆ ಬಂದದ್ದು ಬಿಕಿನಿ ಪೊಟೋ ದಿಂದ!

ಅತ್ಯಂತ ಸಂಪ್ರದಾಯವಾಗಿದ್ದ ಸಂದರ್ಭದಲ್ಲಿ ಫೋಟೋಶೂಟ್‌ಗಾಗಿ ಬಿಕಿನಿ ಧರಿಸಲು ನಾನು  ಧೈರ್ಯ ಮಾಡಿದ್ದೆ. ನನ್ನ ಮದುವೆಗೂ ಸ್ವಲ್ಪ ಸಮಯದ ಮೊದಲು ನಾನು ಈ ಫೋಟೋಶೂಟ್​​ನಲ್ಲಿ ಭಾಗಿಯಾಗಿದ್ದೆ.  ಎರಡು ತುಂಡಿನ ಬಿಕಿನಿ ಬಟ್ಟೆಯನ್ನು ನನ್ನ ಪೊಟೋಗ್ರಾಫರ್ ಗೆ  ತೋರಿಸಿದಾಗ ಅವರೂ ಕೂಡ ಬೆಚ್ಚಿಬಿದ್ದಿದ್ದರು.  ಈ ಬಿಕಿನಿ ಉಡುಗೆ ತೊಡಲು ನೀವು ಸಿದ್ದರಿದ್ದೀರಾ ಎಂದು ಪೊಟೋಗ್ರಫರ್  ಹಲವು ಬಾರಿ ನನ್ನನ್ನು ಪ್ರಶ್ನಿಸಿದ್ದರು.  ನಾನು ಬಿಕಿನಿ ಧರಿಸಿದ್ದಕ್ಕಾಗಿ ನನಗಿಂತ  ಹೆಚ್ಚು ಅವರೆ ಆತಂಕಗೊಂಡಿದ್ದರು ಎಂದು  ಶರ್ಮಿಳಾ ಅವರು ತಮ್ಮ ಬಿಕಿನಿ ಪೊಟೋಶೂಟ್ ಬಗ್ಗೆ ಈಗ ನೆನಪಿಸಿಕೊಳ್ಳುತ್ತಿದ್ದಾರೆ.

#sharmila tagore bikini

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99