ಸುದ್ದಿಗಳು
ಲೋಡ್ ಆಗುತ್ತಿದೆ...

UDUPI ; ಆಸ್ಪತ್ರೆಯಲ್ಲಿ ಕಂಪ್ಯೂಟರ್ ಕಳವು ; ಪ್ರಕರಣ ದಾಖಲು

ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಕಳವಾಗಿದೆ. ಆಸ್ಪತ್ರೆಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಪ್ರಕಾಶ್‌ ಎಸ್‌. ಅವರ  8 ಸಾವಿರ ಮೌಲ್ಯದ ಕಂಪ್ಯೂಟರ್ ಕಳವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕಾಶ್ ಅವರು ಜೂನ್ 11ರಂದು, ಮಧ್ಯಾಹ್ನ 2 ಗಂಟೆಗೆ ರಜೆಯಲ್ಲಿ ತೆರಳಿದ್ದು, ಮರುದಿನ ಬೆಳಗ್ಗೆ 8.30ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಈ ವೇಳೆ ಅವರು ಕೆಲಸ ಮಾಡುತ್ತಿದ್ದ ಟೇಬಲ್ ಮೇಲಿದ್ದ ಕಂಪ್ಯೂಟರ್‌, ಸಿಪಿಯು, ಕೀಬೋರ್ಡ್, ಮೌಸ್‌ ನಾಪತ್ತೆಯಾಗಿತ್ತು. ಕಳವಾಗಿರುವ ಬಗ್ಗೆ  ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW