-->

ಬೇ....ರ್ಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯರೇ ಬೇಕಾ ಎಂದು ಹಲ್ಲೆ

ಬೇ....ರ್ಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯರೇ ಬೇಕಾ ಎಂದು ಹಲ್ಲೆ

ಉಪ್ಪಿನಂಗಡಿ: ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಭಿನ್ನ ಧರ್ಮಕ್ಕೆ ಸೇರಿದ ಜೋಡಿಗೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ  ದೇರಣೆ ಎಂಬಲ್ಲಿ ನಡೆದಿದೆ.

ಪುತ್ತೂರಿನ 21 ವರ್ಷದ ಯುವಕನೋರ್ವ ತನ್ನ ಪ್ರೇಯಸಿಯೊಂದಿಗೆ ರಿಕ್ಷಾದಲ್ಲಿ ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು  ಗುಂಡ್ಯಕ್ಕೆ ಬಂದು, ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತ  ಕಡಬ ತಾಲೂಕು ಸಿರಿಬಾಗಿಲು ಗ್ರಾಮದ  ದೇರಣೆ ಎಂಬಲ್ಲಿಗೆ ತಲುಪುವಾಗ ಯುವಕರ ಗುಂಪೊಂದು ಜೋಡಿಯನ್ನು ತಡೆದಿದೆ.
ಬಳಿಕ ಜೋಡಿಯನ್ನು ವಿಚಾರಿಸಿದ್ದು, ಈ ವೇಳೆ ಅವರಿಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರೆಂದು ತಿಳಿದು ಬಂದಿತ್ತು.

ಈ ವೇಳೆ ಯುವಕರ ಗುಂಪು, “ಬೇವರ್ಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ ? ಎಂದು ಹೇಳುತ್ತಾ ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ತಲೆಗೆ  ಕೈಯಿಂದ ಯದ್ವಾತದ್ವಾ ಹೊಡೆದುದಲ್ಲದೆ ಅಲ್ಲಿಯ ರಸ್ತೆಯ ಬದಿಯಿಂದ ಪೊದೆಯಿಂದ ಬೆತ್ತವನ್ನು ತುಂಡು ಮಾಡಿಕೊಂಡು ಬಂದು  ಬೆತ್ತದಿಂದ ಪಿರ್ಯಾದಿದಾರರ  ಬೆನ್ನಿಗೆ ಕಾಲಿಗೆ ಕೈಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮುಂದಕ್ಕೆ ಹಿಂದು ಹುಡುಗಿಯನ್ನು ಈ ರೀತಿಯಾಗಿ ಸುತ್ತಾಡಿಸಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿರುವುದಾಗಿ ಯುವಕ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಈ ದೂರಿನನ್ವಯ ಸುರೇಂದ್ರ, ತೀರ್ಥ ಪ್ರಸಾದ್‌, ಜಿತೇಶ್‌, ಬಾಲಚಂದ್ರ, ರಂಜಿತ್ ಎಂಬವರ ವಿರುದ್ಧ ದೂರು ದಾಖಲಿಸಲಾಗಿದ್ದು, ಈ ಪೈಕಿ ಬಾಲಚಂದ್ರ, ರಂಜಿತ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99