-->
ads hereindex.jpg
ಜೀವನದಲ್ಲಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ: ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ 'ಶ್ರೀರಾಮಚಂದ್ರ' ಸಿನಿಮಾ ಬೆಡಗಿ

ಜೀವನದಲ್ಲಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ: ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ 'ಶ್ರೀರಾಮಚಂದ್ರ' ಸಿನಿಮಾ ಬೆಡಗಿ

ಹೈದರಾಬಾದ್​: ನಟಿ ಮೋಹಿನಿ ಅಂದರೆ ಹೆಚ್ಚಿನವರಿಗೆ ತಿಳಿಯುತ್ತೋ ಗೊತ್ತಿಲ್ಲ. ಆದರೆ ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ “ಶ್ರೀರಾಮಚಂದ್ರ” ಚಿತ್ರದ ನಟಿ ಮೋಹಿನಿ ಅಂದರೆ ಎಲ್ಲರಿಗೂ ಗೊತ್ತಾಗಬಹುದು ಆಕೆ ಯಾರೆಂದು. ಕನ್ನಡದ ಬೆರಳೆಣಿಕೆ ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಕನ್ನಡಿಗರಿಗೆ ಎಂದಿಗೂ ಚಿರಪರಿಚಿತರಾಗಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಅಭಿನಯದ ಕಲ್ಯಾಣ ಮಂಟಪ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಮೋಹಿನಿ, ಶ್ರೀರಾಮಚಂದ್ರ, ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ ಹಾಗೂ ನಿಶ್ಯಬ್ದ, ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಮೋಹಿನಿ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್​ರಂತಹ ದಿಗ್ಗಜ ನಟರೊಂದಿಗೆ ನಟಿಸಿದ ಕೀರ್ತಿಯನ್ನು ಮೋಹಿನಿ ಹೊಂದಿದ್ದಾರೆ.  

ಕೈಯಲ್ಲಿ ಉತ್ತಮ ಅವಕಾಶಗಳು ಬರುತ್ತಿದ್ದಾಗಲೇ ನಟಿ ಮೋಹಿನಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸಿನಿಮಾ ಜಗತ್ತಿನಿಂದ ದೂರವಾದರು. 1999ರಲ್ಲಿ ಭರತ್ ಎಂಬುವರನ್ನು ವಿವಾಹವಾದ ಮೋಹಿನಿ ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ನೆಲೆಸಿದರು. ದಂಪತಿಗೆ ಅನಿರುದ್ಧ್ ಮತ್ತು ಅದ್ವೈತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 

ಮೋಹಿನಿ 2006ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರೆಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ತಮ್ಮ ಜೀವನದ ಕೆಲವು ಅದ್ಭುತ ಹಾಗೂ ನೋವಿನ ಕ್ಷಣಗಳನ್ನು ಮೋಹಿನಿ ತೆರೆದಿಟ್ಟಿದ್ದಾರೆ. 'ಮದುವೆ ಆದ ಐದು ವರ್ಷಗಳವರೆಗೆ ತಮ್ಮ ಜೀವನ ತುಂಬಾ ಸಂತಸದಿಂದ ಕೂಡಿತ್ತು. ಆದರೆ, ಆ ಬಳಿಕದ ದಿನಗಳಲ್ಲಿ ತಮಗೇ ಗೊತ್ತಿಲ್ಲದಂತೆಯೇ ಬದಲಾದ ಮಾನಸಿಕ ವೇದನೆ ಇಡೀ ಜೀವನವನ್ನೇ ಬದಲಾಯಿಸಿಬಿಟ್ಟಿತ್ತು. ತಾನೇನು ಮಾಡುತ್ತಿದ್ದೇನೆ ಎಂದು ತಿಳಿಯುವುದು ಸಹ ಕಷ್ಟವಾಯಿತು. ಈ ಸಮಯದಲ್ಲಿ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದೆ' ಎಂದು ಮೋಹಿನಿ ಹೇಳಿಕೊಂಡಿದ್ದಾರೆ. 

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಾನೊಬ್ಬ ಜ್ಯೋತಿಷಿಯನ್ನು ಸಂಪರ್ಕಿಸಿದೆ. ನಿಮ್ಮ ವಿರುದ್ಧ ವಾಮಾಚಾರ ನಡೆದಿದೆ ಎಂದು ಜ್ಯೋತಿಷಿ ಹೇಳಿದರು. ಐದು ವರ್ಷಗಳು ಕಳೆದಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ದೇವರೊಬ್ಬನೇ ನಿಮ್ಮನ್ನು ರಕ್ಷಿಸಬಲ್ಲನೆಂದು ಹೇಳಿದರು.  ನಿಜವಾದ ದೇವರು ಬಂದು ನನ್ನನ್ನು ಹೇಗೆ ರಕ್ಷಿಸುತ್ತಾನೆ ಎಂದು ನನಗೆ ಅರ್ಥವಾಗಲಿಲ್ಲ. ಅದೇ ಯೋಚನೆಯಲ್ಲಿ ಧ್ಯಾನಿಸುತ್ತಿರುವಾಗ, ನಾನು ಕನಸಿನಲ್ಲಿ ಯೇಸುವನ್ನು ಕಂಡೆ. ಈ ಅನುಕ್ರಮದಲ್ಲಿಯೇ ನಾನು ಮಹಾನ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಯೇಸು ತನ್ನ ವಕ್ರತೆಯನ್ನು ನೋಡುತ್ತಿರುವುದನ್ನು ಮತ್ತು ನನ್ನನ್ನು ರಕ್ಷಿಸುವುದನ್ನು ನಾನು ನೋಡಿದೆ ಎಂದು ಮೋಹಿನಿ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೋಹಿನಿಯ ಹೇಳಿಕೆಯನ್ನು ಒಪ್ಪಿದರೆ, ಇನ್ನು ಕೆಲವರು ಅವರ ಹೇಳಿಕೆ ಮತಾಂತರ ಮಾಡುವ ರೀತಿ ಇದೆ ಎಂದಿದ್ದಾರೆ. 

Ads on article

Advertise in articles 1

suvidha.jpg

advertising articles 2

Advertise under the article

SNM4.jpeg CLICK-HERE