ಕೆಲಸಕ್ಕೆಂದು ಪುತ್ತೂರಿಗೆ ಬಂದ ಯುವತಿ ನಾಪತ್ತೆ!(ಗಲ್ಪ್ ಕನ್ನಡಿಗ)ಪುತ್ತೂರು:  ಪುತ್ತೂರಿನ ಕಚೇರಿಯಲ್ಲಿ ಕೆಲಸಕ್ಕೆಂದು  ಬಂದ ಯುವತಿಯೊಬ್ಬಳು ಕಾಣೆಯಾದ ಘಟನೆ ನಡೆದಿದೆ.


(ಗಲ್ಪ್ ಕನ್ನಡಿಗ)ಈಕೆ ಕೆಲಸಕ್ಕಾಗಿ ಪುತ್ತೂರಿಗೆ ಬಂದವಳು ವಾಪಸ್ಸು ಮನೆಗೆ ತೆರಳದೆ ಕಾಣೆಯಾಗಿದ್ದಾಳೆ. ಈ ಬಗ್ಗೆ  ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


(ಗಲ್ಪ್ ಕನ್ನಡಿಗ)ಕಡಬ ತಾಲೂಕು ಪುಣ್ಚಪಾಡಿ ಗ್ರಾಮದ ನಡುಮನೆ ನಿವಾಸಿ  ಚಂದ್ರಹಾಸ ರೈ ರವರ ಮಗಳು ಮನೀಶಾ ರೈ (22 )   ಕಾಣೆಯಾದ ಯುವತಿ.
ಪುತ್ತೂರಿನ ಕಲ್ಲಾರೆ ಎಂಬಲ್ಲಿರುವ ಕ್ವಾಲಿಟಿ ಪಾಮ್ಸ್ ನವರ ಅಫೀಸ್ ನಲ್ಲಿ ಈಕೆ ಕೆಲಸ ಮಾಡುತ್ತಿದ್ದಳು.
 ಅ 8 ರಂದು ಪುಣ್ಚಪಾಡಿಯ ತನ್ನ ಮನೆಯಿಂದ ಕೆಲಸಕ್ಕೆಂದು ಬಂದಿದ್ದಳು .ಸಂಜೆ 5.30 ರವರೆಗೂ ಅಲ್ಲಿ ಕೆಲಸ ಮಾಡಿ ವಾಪಸ್ಸು ಮನೆಗೆ ಹೋಗದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಚಂದ್ರಹಾಸ ರೈಯವರು ತನ್ನ ದೂರಿನಲ್ಲಿ ತಿಳಿಸಿದ್ದಾರೆ.

(ಗಲ್ಪ್ ಕನ್ನಡಿಗ)
ಕಾಣೆಯಾದ ಯುವತಿ ಪತ್ತೆಯಾದಲ್ಲಿ ಪುತ್ತೂರು ಮಹಿಳಾ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 08251- 233500

(ಗಲ್ಪ್ ಕನ್ನಡಿಗ)


  


(ಗಲ್ಫ್ ಕನ್ನಡಿಗ)