ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ದ.ಕ. ಜಿಲ್ಲೆಯ ತಾಲೂಕುವಾರು ಕೋವಿಡ್ ಸೋಂಕಿತರ ಮಾಹಿತಿ


(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದು, ಇಂದು ಮತ್ತೆ 307ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ ಮಂಗಳೂರು ತಾಲೂಕಿನ ಗರಿಷ್ಠ 197 ಮಂದಿಗೆ ಸೋಂಕು ದೃಢಪಟ್ಟಿರುವುದು ತಾಲೂಕಿನಾದ್ಯಂತ ಜನರನ್ನು ಆತಂಕಕ್ಕೀಡು ಮಾಡಿದೆ.


(ಗಲ್ಪ್ ಕನ್ನಡಿಗ)ಅಲ್ಲದೆ, ಬಂಟ್ವಾಳ ತಾಲೂಕಿನ 57 ಮಂದಿ, ಪುತ್ತೂರು ತಾಲೂಕಿನ 14 ಮಂದಿ, ಸುಳ್ಯ ತಾಲೂಕಿನ 17ಮಂದಿ, ಬೆಳ್ತಂಗಡಿ ತಾಲೂಕಿನ 14 ಮಂದಿ ಹಾಗೂ ಹೊರ ಜಿಲ್ಲೆಗಳ 8 ಮಂದಿಗೆ ಕೊರೊನಾ ದೃಢಪಟ್ಟಿದೆ.


(ಗಲ್ಪ್ ಕನ್ನಡಿಗ)ಜಿಲ್ಲೆಯಲ್ಲಿ ಇದುವರೆಗೆ 66,056ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 57,678 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಳಿದಂತೆ 8,378 ಮಂದಿಯ ವರಿದಿ ಪಾಸಿಟಿವ್ ಬಂದಿದೆ. ಇದುವರೆಗೆ 6115 ಮಂದಿ ಕೊರೊನಾ ಮುಕ್ತರಾಗಿ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ



 

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW