ಮಕ್ಕಿಮನೆ ಕಲಾವೃಂದ ದಿಂದ ವಿನೂತನ ಶೈಲಿಯಲ್ಲಿ ಯಕ್ಷೋಲ್ಲಾಸ ಎಂಬ ಯಕ್ಷನಾಟ್ಯ ನಾಟ್ಯದ ಪ್ರಸ್ತುತಿ


ಮಂಗಳೂರು :- ವಿಶ್ವ ಕಂಟಕವಾದ ಕೊರೋನದ ಈ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ವೇದಿಕೆಗಳಲ್ಲಿ ಕಲಾವಿದರಿಗೆ  ಸಾಂಸ್ಕೃತಿಕ ಕಾರ್ಯಕ್ರಮಗಳು  ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರಲ್ಲಿ ಇರುವ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಪೇಸ್ ಬುಕ್ ಹಾಗೂ ಯೂಟ್ಯೂಬ್ ಚಾನಲ್ ಸೇರಿದಂತೆ ಸಮಾಜಿಕ ಜಾಲತಾಣ ಗಳಲ್ಲಿ ನಿರ್ಮಿಸಿ ಲಾಕ್ ಡೌನ್ ಆರಂಭದಿಂದಲೂ ಸಂಗೀತ, ನೃತ್ಯ, ಚಿತ್ರಕಲೆ, ಪ್ರಬಂಧ ಬರೆಯುವುದು ಹೀಗೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ನೆಡೆಸಿರುತ್ತದೆ. 
ಇದೀಗ ಮತ್ತೂಂದು ಪ್ರಯೋಗ ವೆಂಬಂತೆ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರೋತ್ಸಾಹಿಸುವ
ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಅರಲಿಸುತ್ತಿರುವ ಬಾಲ ಹಾಗೂ ಯುವ ಕರಾವಳಿ ಪ್ರದೇಶದ ಕಲಾವಿದರಾದ ಸಾಯಿಸುಮಾ ನಾವಡ ಕಾರಿಂಜ,ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ ಗಟ್ಟಿ ಕೈರಂಗಳ, ಟಿ. ಎನ್ ಶ್ರೀರಕ್ಷಾ ಭಟ್ ಕಳಸ, ಕೃತಿ ವಿ ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ ,ಅನನ್ಯ ಬೆಳ್ತಂಗಡಿ ,ಸುಷ್ಮಿತಾ ಆರ್ ಕಳಸ
ಹಾಗೂ ಬಾಲ ಪ್ರತಿಭೆಗಳಾದ ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ ಮಂಗಳೂರು, ಖ್ಯಾತಿ ಆರ್ ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್
ಇವರ ನಾಟ್ಯ ಪ್ರಸ್ತುತಿ ಯೋನ್ನು ಶುಭಾಶಯ ಜೈನ್ ರವರ ಕಾಯದಾನ ಪ್ರಸಂಗದ ಸಾಹಿತ್ಯಕ್ಕೆ ಯುವ ಬಾಗವತರಾದ ಅಮೃತ ಅಡಿಗ ಅವರ ಸಿರಿ ಕಂಠದಲ್ಲಿ ಕೌಶಿಕ್ ರಾವ್ ಹಾಗೂ ಕೌಶಲ್ ರಾವ್ ಅವರ ಚೆಂಡೆಮದ್ದಳೆ ಸಹಕಾರದೊಂದಿಗೆ ಪ್ರಸ್ತುತ ಪಡಿಸಲಾಗಿದ್ದು ಇದರ ಸಯೋಜನೆಯ ಜವಾಬ್ದಾರಿಯನ್ನು ಸುದೇಶ್ ಜೈನ್ ಮಕ್ಕಿಮನೆ ಹಾಗೂ ಸಂಕಲನವನ್ನು ನಿಶಾಲ್ ವಾಮಂಜೂರು ಹಾಗೂ ಸುಮಂತ್ ಮಂಗಳೂರು ಇವರು ಮಾಡಿರುತ್ತಾರೆ

Comments