ವುಮೆನ್ ಇಂಡಿಯಾ ಮೂವ್ ಮೆಂಟ್ ( WIM ) ಬಂಟ್ವಾಳ ವತಿಯಿಂದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಕೋರಿ ದ.ಕ.ಜಿಲ್ಲಾದ್ಯಂತ ಮನವಿ

 ಕೊರೋನ ವೈರಸ್ ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರು ಕೆಲಸವಿಲ್ಲದೇ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಸಂಧರ್ಭ ವಾಗಿದೆ ಪ್ರಸಕ್ತ ಸನ್ನಿವೇಶ.  ಇಂತಹ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಸಮಯದ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕೆಂದು ಜನ ಸಾಮಾನ್ಯರ ಮೇಲೆ ಒತ್ತಡ ಹೇರುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂಬುದನ್ನು ರಾಜ್ಯಸರ್ಕಾರವು ಮನಗಾಣಬೇಕಾಗಿದೆ.  
           ಹಾಗಾಗಿ ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನ ಸಾಮಾನ್ಯರೊಂದಿಗೆ ಸರ್ಕಾರ ಕರುಣೆ ತೋರಿ ಲಾಕ್ ಡೌನ್ ಸಂಧರ್ಭದಲ್ಲಿನ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕೆಂದು, ನಮ್ಮ ದೇಶದ ಬೇರೆ ರಾಜ್ಯಗಳಲ್ಲಿ ಬಿಲ್ ಕಡಿಮೆ ಮಾಡಿರುವಂತದ್ದು ಹಾಗೂ ಮನ್ನಾ ಮಾಡಿರುವ ಉದಾಹರಣೆಗಳು ಇರುವಾಗ ನಮ್ಮ ರಾಜ್ಯ ಕೂಡ ಅದೇ ರೀತಿ ಮಾಡಬೇಕೆಂದು ವುಮೆನ್ ಇಂಡಿಯಾ ಮೂವ್ ಮೆಂಟ್ ( WIM ) ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ದ.ಕ. ದ ವಿವಿಧ ಕ್ಷೇತ್ರ ಇವರ ಮೂಲಕ ಕರ್ನಾಟಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. *ಮಂಗಳೂರು ದಕ್ಷಿಣ ವಿಮ್ ಜಿಲ್ಲಾ ಸಮಿತಿ ಸದಸ್ಯರಾದ ಸಂಶಾದ್ ಕುಳಾಯಿ ನೇತ್ರತ್ವದಲ್ಲಿ, ಬಿ.ಸಿ.ರೋಡ್ ಝಹನಾ ಬಂಟ್ವಾಳ ,ಪುತ್ತೂರಿನಲ್ಲಿ ಕೌನ್ಸಿಲರ್ ಝೊಹರಾ, ಮುಲ್ಕಿ ಮೂಡಬಿದ್ರೆ ಯಲ್ಲಿ ಆಯಿಶಾ ಬಜ್ಪೆ, ಬೆಳ್ತಂಗಡಿಯಲ್ಲಿ ಮರಿಯಮ್, ಸುಳ್ಯದಲ್ಲಿ ನಸ್ರಿಯಾ ಬೆಳ್ಳಾರೆ, ಮಂಗಳೂರಿನಲ್ಲಿ ಅಡ್ವೋಕೇಟ್ ರುಬಿಯಾ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು.*

Comments