ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅಧಿಕಾರ ಸ್ವೀಕಾರ


ಮಂಗಳೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು. 

ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದಡಾ.ಪಿ.ಎಸ್.ಹರ್ಷ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ, ನಕ್ಸಲ್ ನಿಗ್ರಹ ಪಡೆಯ ಡಿಐಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಕಾಸ್ ಕುಮಾರ್ ಅವರನ್ನು ಪೊಲೀಸ್ ಆಯುಕ್ತರಾಗಿ  ರಾಜ್ಯ ಸರಕಾರ ನಿಯೋಜನೆ ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ ಇಂದು ಅವರು, ಅಧಿಕಾರ ಸ್ವೀಕರಿಸಿದರು.

ವಿಕಾಸ್ ಕುಮಾರ್ ಅವರು ಈ ಹಿಂದೆ ಚಿಕ್ಕಮಂಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Comments