ರಸ್ತೆ ಅಗಲೀಕರಣಕ್ಕೆ ಪ್ರತಿರೋಧ - ಮನವೊಲಿಕೆ ಕಾರ್ಯದಲ್ಲಿ ಶಾಸಕ ಕಾಮತ್


ಮಂಗಳೂರು ನಗರದ ಹೃದಯ ಭಾಗದ ಕ್ಲಾಕ್ ಟವರ್ - ವಿಜಯ ಪೆನ್ ಮಾರ್ಟ್ ವರೆಗಿನ ರಸ್ತೆ ಅಗಲೀಕರಣಕ್ಕೆ ಸ್ಥಳೀಯ ಅಂಗಡಿ ಮಾಲಕರ ವಿರೋಧದಿಂದ ಕಾಮಗಾರಿ ತೊಡಕಾಗಿತ್ತು. ಹಾಗಾಗಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಅಂಗಡಿ ಮಾಲಕರ ಮನವೊಲಿಸಲು ಮಾತುಕತೆ ನಡೆಸಿದ್ದಾರೆ. ಅದರ ಫಲಶ್ರುತಿಯಲ್ಲಿ ಅಂಗಡಿ ಮಾಲಕರೂ ಕೂಡ ಜಾಗ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅಸಾಧ್ಯವಾಗದೆ ಇರುವ ಕಾರ್ಯ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಯತ್ನದಿಂದ ಫಲ ಕಾಣುತ್ತಿದೆ.

ಈ ಸಂಧರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ, ಬಿಜೆಪಿ ಮುಖಂಡರು, ಸ್ಮಾರ್ಟ್ ಸಿಟಿ, ಮನಪಾ ಅಧಿಕಾರಿಗಳು‌ ಉಪಸ್ಥಿತರಿದ್ದರು.

Comments