ಗೋ ಸಾಗಾಟಗಾರ, ಮೊಹಮದ್ ಹನೀಫ್ ಮೇಲೆ ಗೂಂಡಾ ಕಾಯ್ದೆಗೆ ವಿಶ್ವಹಿಂದೂ ಪರಿಷತ್ ಆಗ್ರಹ.


ಮಂಗಳೂರು: ಕೆಲದಿನಗಳ ಹಿಂದೆ ಕೊಟ್ಟಾರದಲ್ಲಿ ಗೋಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮುಹಮ್ಮದ್ ಹನೀಫ್ ಅಂತಾರಾಜ್ಯ ಗೋವು ಕಳ್ಳ ಸಾಗಾಟಗಾರನಾಗಿದ್ದು ಈತನ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹಿಸಿದೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ಇತ್ತೀಚಿಗೆ ಕೊಟ್ಟಾರದಲ್ಲಿ ಗೋ ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಜೋಕಟ್ಟೆಯ ಮೊಹಮದ್ ಹನೀಫ್ ಎಂಬವನು ಅಂತರರಾಜ್ಯ ಗೋ ಕಳ್ಳ ಸಾಗಾಟಗಾರನಾಗಿದ್ದು, ಅಕ್ರಮವಾಗಿ ಗೋವುಗಳನ್ನು ಹತ್ಯೆಮಾಡಿ ಮಾರಾಟ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ.

ಕಳೆದ ವರ್ಷ ಜೋಕಟ್ಟೆಯ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿ ವಶಪಡಿಸಿದ ಗೋವುಗಳನ್ನು ಈತ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಿಂದ ಹಿಂಪಡೆದ ಸಂಧರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಕೋಮುಗಲಭೆಗೆ ಪ್ರಚೋದನೆ ನೀಡಿದ್ದ. ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆ ಪ್ರಕರಣಗಳಿದ್ದು ಬ್ರಹ್ಮವರ, ಸಕಲೇಶಪುರ, ಹಾಸನ, ಚಿಕ್ಕಮಗಳೂರು, ಉಪ್ಪಿನಂಗಡಿ ಮತ್ತು ಪಣಂಬೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದೀಗ ಅಕ್ರಮ ಗೋಸಾಗಾಟದಲ್ಲಿ ಉರ್ವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇವನ ಮೇಲೆ ಇಷ್ಟು ಕೇಸುಗಳು ಇದ್ದರೂ ಗೋವುಗಳ ಸಾಗಾಟ ನಿರಂತ ಮಾಡುತ್ತಿರುವುದು ಕಂಡುಬಂದಿರುವುದರಿಂದ ಇವನ ಮೇಲೆ ಗೂಂಡಾ ಕಾಯ್ದೆಯನ್ನು ಹಾಕಿ ಕಠಿಣ ಶಿಕ್ಷೆಗೆ ಒಳಪಡಿಸಲು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.


 
ಶುಕ್ರವಾರದ ಹನೀಫ್ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ” ನಾನು ಸೂಕ್ತ ದಾಖಲೆಯನ್ನು ಹೊಂದಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತಿದ್ದೆ ಎಂದು ಹೇಳಿಕೆ ನೀಡಿರುತ್ತಾನೆ, ಕಾನೂನು ಪ್ರಕಾರ ಯಾವುದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡಬೇಕಾದರೆ, 2016 Transport Ammendment Act 11 ನೇ ತಿದ್ದುಪಡಿ ಪ್ರಕಾರ RTO ದಲ್ಲಿ ಜಾನುವಾರು ಸಾಗಾಟದ ವಾಹನ ಎಂದು ದಾಖಲಾಗಿರಬೇಕು, ಮತ್ತು ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಬೇಕಾದರೆ ವಾಹನದಲ್ಲಿ ಸಾಕಷ್ಟು ಜಾಗವಿರಬೇಕು, ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು, ವಾಹನದ ವೇಗ 24KM ಗಂಟೆಗೆ ಮೀರಬಾರದು, ಜಾನುವಾರು ಸಾಗಾಟ ಮಾಡುವಾಗ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದಿರಬೇಕು ಮತ್ತು ಸರಕಾರಿ ಪಶು ವೈದ್ಯಾಧಿಕಾರಿಯವರ ಜಾನುವಾರುಗಳು ಸಾಗಾಟ ಯೋಗ್ಯ ಸರ್ಟಿಫಿಕೇಟ್ ನೀಡಬೇಕು. ಇದಾವುದೂ ಧಾಖಲೆಗಳು ಇಲ್ಲ ಎಂದರು.

ಗೋಕಳ್ಳ ಸಾಗಾಣಿಕೆಯ ಜಾಲಕ್ಕೆ ಕಡಿವಾಣ ಹಾಕಲು ರಾಜ್ಯಸರಕಾರಕ್ಕೆ ಆಗ್ರಹ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನವಾಗುತ್ತಿದ್ದು ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ,ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ ಚೀಟಿಗಳನ್ನು ಗೋಕಳ್ಳರು ತಂದು ಕದ್ದ ಜಾನುವಾರುಗಳನ್ನು ಸಕ್ರಮ ಎಂದು ತೋರಿಸುತ್ತಿದ್ದಾರೆ ಇದನ್ನು ತಡೆಯಲು
1) ರಾಜ್ಯವ್ಯಾಪ್ತಿ ಜಾನುವಾರು ಸಾಗಾಟಕ್ಕೆ ಆಪ್ ಮಾಡಬೇಕು
2) ಪ್ರತಿ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳ್ಳ ಸಾಗಾಟ ಮತ್ತು ಹತ್ಯೆ ಪತ್ತೆಹಚ್ಚಲು ವಿಶೇಷ ತಂಡ ರಚಿಸಬೇಕು, ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇದರ ಬಗ್ಗೆ ಬೇಹುಗಾರಿಕೆ ನಡೆಸಿ, ತಾಣ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ ನಡೆಯದಂತೆ ಠಾಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ತಪಿದಲ್ಲಿ ಆ ಠಾಣಾ ಸಿಬ್ಬಂದಿ/ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳಬೇಕು.
3) ಪೊಲೀಸರು ಮಹಾಜರನ್ನು ನ್ಯಾಯಯುತವಾಗಿ ಕಾನೂನು ತಜ್ಞರ ಸಹಕಾರದೊಂದಿಗೆ ಬರೆಯಬೇಕು.
4) ಕೇಂದ್ರ ಸರಕಾರ ರಚಿಸಿದ ನಿಯಮಾವಳಿಯಂತೆ (2016 Transport Ammendment Act 11 ನೇ ತಿದ್ದುಪಡಿ ಪ್ರಕಾರ) ಜಾನುವಾರುಗಳಿಗೆಂದೇ ತಯಾರಾದ ವಿಶೇಷ ಜಾನುವಾರು ವಾಹನದಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡಬೇಕು, ತಪಿದ್ದಲ್ಲಿ RTO ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು.
ಈ ರೀತಿ ಗೋಕಳ್ಳತನ, ಅಕ್ರಮ ಗೋಸಾಗಾಟ ಜಾಲವನ್ನು ಭೇದಿಸಿ ಗೋವುಗಳನ್ನು ರಕ್ಷಿಸಬೇಕೆಂದು ರಾಜ್ಯಸರಕಾರಕ್ಕೆ ಆಗ್ರಹಿಸಿದರು.

Comments