ಆಶಾ ಕಾರ್ಯಕರ್ತೆ ನಾಪತ್ತೆ


ಮಂಗಳೂರು :- ಯುವತಿ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಐತೂರು ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆ, ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಿದ್ದ ಸೌಮ್ಯ (೩೪) ಎಂಬವರು ಜೂನ್ ೮ ರಂದು ಗರ್ಭಿಣಿ ಹೆಂಗಸನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ತಿಳಿಸಿ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
     ಕಾಣೆಯಾದ ಮಹಿಳೆಯ ಚಹರೆ ಇಂತಿವೆ:- ಹೆಸರು-ಸೌಮ್ಯ, ಎತ್ತರ ೫.೨, ಶರೀರ-ಸಾಧಾರಣ ಶರೀರ, ಗೋಧಿ ಮೈ ಬಣ್ಣ,  ಧರಿಸಿರುವ ಬಟ್ಟೆ-ಹಳದಿ ಮತ್ತು ಕೇಸರಿ ಬಣ್ಣ ಮಿಶ್ರಿತ ಚೂಡಿದಾರ. ಮಾತನಾಡುವ ಭಾಷೆ-ಕನ್ನಡ, ತುಳು, ಮಲಿಯಾಳಂ, ತಮಿಳು.
     ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಡಬ ಪೋಲೀಸ್ ಠಾಣೆ  ದೂರವಾಣಿ ಸಂಖ್ಯೆ ೦೮೨೫೧ ೨೬೦೦೪೪, ೦೮೨೫೧ ೨೫೧೦೫೫, ೮೨೫೧೨೩೦೫೦೦, ೮೨೪೨೨೨೦೫೦೦, ೮೨೪೨೨೨೦೫೦೧ ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments