ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಎಸ್ ಡಿ ಪಿ ಐ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ


ಮಂಗಳೂರು:-ಸರಕಾರದ ಜನವಿರೋಧಿ ಕಾಯಿದೆ ಗಳ ವಿರುಧ್ದ ಎಸ್ ಡಿಪಿಐ ಮಂ.ದಕ್ಷಿಣ ವಿಧಾ‌ನ ಸಭಾ ಸಮಿತಿ ವತಿಯಿಂದ ಮಂಗಳೂರು ಮಹಾನಗರಪಾಲಿಕೆ ಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ,ಖಾಸಗಿ ಆಸ್ಪತ್ರೆಯ ಚಿಕಿತ್ಸೆ ದರ ಕನಿಷ್ಠವಾಗಲಿ, 2ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಿ ಮತ್ತು ಪೆಟ್ರೋಲ್,ಡೀಸೆಲ್ ಬೆಲೆ ಇಳಿಯಲಿ ಎಂಬಿತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಮಾತನಾಡಿ ಸರಕಾರವೂ ಕೊರೋನಾದ ಈ ಸಂಕಷ್ಟದ ಸಂಧರ್ಭದಲ್ಲೂ ಬಡಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಖೇದಕರ, ಇದನ್ನು ಎಲ್ಲಾ ವರ್ಗದ ಜನರು ಅರಿತು ಸರಕಾರದ ಇಂತಹ ಧೋರಣೆಯ ವಿರುದ್ಧ ಧ್ವನಿಯೆತ್ತಬೇಕಾಗಿದೆ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಾರ್ಪುರೇಟರ್ ಮುನೀಬ್ ಬೆಂಗರೆ ಮಾತನಾಡಿದರು.
ಮಂ.ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅದ್ಯಕ್ಷ ಸುಹೈಲ್ ಖಾನ್ , ಎಸ್ ಡಿಪಿಐ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ನಿಸಾರ್ ಮರವೂರು, ಎಸ್ ಡಿ ಟಿ ಯು ಸದಸ್ಯ ನೌಫಲ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಸ್ವಾಗತಿಸಿ, ಧನ್ಯವಾದಗೈದರು.
ಪ್ರತಿಭಟನೆಯ ನಂತರ  ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

Comments