ಶ್ರೇಷ್ಠ ಭಾರತ, ಶ್ರೇಷ್ಠ ಪ್ರಧಾನಿ.ಐರೋಡಿಯಲ್ಲಿ ಕೋಟ ಶ್ಲಾಘನೆ


ಭಾರತ ವಿಶ್ವದಲ್ಲೇ ಸರ್ವ ಶ್ರೇಷ್ಠ ದೇಶವಾಗಿ ಹೊರಹೊಮ್ಮುತ್ತಿದ್ದು, ಇದೇ ಸಂದರ್ಭದಲ್ಲಿ ಶ್ರೇಷ್ಠ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಜಗತ್ತೇ ಕೊಂಡಾಡುತ್ತಿದೆ. ಹಲವು ಸಮಸ್ಯೆಗಳಿಂದ ಭಾರತ ಇಂದು ಮುಕ್ತವಾಗಿ ಮೇಲೆದ್ದು ನಿಂತಿದೆ. ಜಟಿಲ ಸವಾಲುಗಳನ್ನು ಎದುರಿಸಿ, ಭಾರತ ಎದ್ದು ನಿಂತಿದೆ. ಮೋದಿಯಂತಹ ವಿಶ್ವ ಮಾನ್ಯ ನಾಯಕನ್ನು ಪಡೆದ ಭಾರತ, ಆತ್ಮ ನಿರ್ಭರ ಭಾರತವಾಗಿ ರೂಪುಗೊಳ್ಳುತ್ತಿದೆ ಎಂದು ಹಿಂದೂ ಧಾರ್ಮಿಕ ಧತ್ತಿ, ಮೀನುಗಾರಿಕೆ, ಬಂದರು,  ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಾಸ್ತಾನ ಐರೋಡಿಯಲ್ಲಿ ಹೇಳಿದ್ದಾರೆ.

ಹಿರಿಯ ರಾಜಕೀಯ ಧುರೀಣ, ಮಾಜಿ ಮಂಡಲ ಪ್ರಧಾನ ಐರೋಡಿ ಜಗದೀಶ ಕಾರಂತರ ಮನೆಯಲ್ಲಿ, ಸ್ವಾವಲಂಬಿ ಭಾರತದ ಕಲ್ಪನೆಯನ್ನು ವಿವರಿಸುತ್ತಾ, ಪ್ರಧಾನಿ ಮೋದಿಯವರ ಪತ್ರವನ್ನು ಹಸ್ತಾಂತರಿಸಿ ಕೋಟ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಐರೋಡಿ ಜಗದೀಶ್ ಕಾರಂತ, ತಾಲೂಕು ಪಂಚಾತ್ ಸದಸ್ಯೆ ಜ್ಯೋತಿ ಉದಯ್ ಕುಮಾರ್, ಸ್ಥಳೀಯ ಬಿಜೆಪಿ ಮುಖಂಡ ಐರೋಡಿ ವಿಠಲ ಪೂಜಾರಿ, ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಶಂಕರ್ ಕುಲಾಲ್, ಸಿಎ ಬ್ಯಾಂಕ್ ನಿರ್ದೇಶಕರಾದ ರಮೇಶ್ ಕಾರಂತ್, ಶಂಭು ಪೂಜಾರಿ ಗೋಳಿಬೆಟ್ಟು, ಸಫಲ ಶೆಟ್ಟಿ, ರಾಘವೇಂದ್ರ ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು.

Comments