ಹಾಲ್ ಟಿಕೆಟ್ ತರಲು ಹೋದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ನಾಪತ್ತೆ


ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ತರಲು ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕದ್ರಿ ಸಮೀಪದ ಭೀಮವ್ವ ಯಾನೆ ಸುಜಾತಾ (16) ನಾಪತ್ತೆಯಾದ ವಿದ್ಯಾರ್ಥಿನಿ.

ವಿದ್ಯಾರ್ಥಿನಿಯು ಜೂ.19ರಂದು ಬೆಳಗ್ಗೆ 7:30ಕ್ಕೆ ತನ್ನ ಮನೆಯಿಂದ ಶಾಲೆಗೆ ತೆರಳಿ ಪರೀಕ್ಷಾ ಪ್ರವೇಶ ಪತ್ರ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ ಹೋದವರು ವಾಪಸಾಗದೇ ಕಾಣೆಯಾಗಿದ್ದಾಳೆ.

ಚಹರೆ: ಎತ್ತರ 5.1 ಅಡಿ, ಸಾಧಾರಣ ಮೈ ಬಣ್ಣ, ಉದ್ದ ಮುಖ, ಕಪ್ಪುಕಣ್ಣು, ಕಪ್ಪು ಕೂದಲು. ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ, ತುಳು ಮಾತನಾಡುತ್ತಾರೆ.

ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕದ್ರಿ ಪೊಲೀಸ್ ಠಾಣೆಯನ್ನು (0824- 2220520, 2220800, 2220801) ಸಂಪರ್ಕಿಸಬಹುದು.

Comments