ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಯಕ್ಷೋಲ್ಲಾಸ ನಾಟ್ಯ ಪ್ರಸ್ತುತಿಯ ವಿಡಿಯೋ ಬಿಡುಗಡೆ


ಮಂಗಳೂರು :- ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿ ಯಲ್ಲಿ ಮಂಗಳವಾರ ಯಕ್ಷಗಾನ ಕ್ಷೇತ್ರದ ಹಿರಿಯ ತಜ್ಞ, ವಿಮರ್ಶಕ ,  ಖ್ಯಾತ ವಾಗ್ಮಿ 
ಡಾ. ಪ್ರಭಾಕರ ಜೋಶಿ ಮಕ್ಕಿಮನೆ ಕಲಾವೃಂದ ಯೊಟ್ಯೋಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು. 
ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ , ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್ ಮಂಗಳೂರು, ಜನಾರ್ದನ ಹಂದೆ, ಸನತ್ ಕುಮಾರ್ ಜೈನ್, ಮಾಧವ ಎಂ .ಎಸ್ ಶಿವಮೊಗ್ಗ, ವಿಜೇಶ್ ದೇವಾಡಿಗ ಮಂಗಳಾದೇವಿ, ಸುದೇಶ್ ಜೈನ್ ಮಕ್ಕಿಮನೆ, ಪ್ರೀತಾ ಮಾಧವ, ಸಂದೀಪ್ ಮಂಗಳೂರು, ನಿಶಾಲ್ ವಾಮಂಜೂರು ಉಪಸ್ಥಿತರಿದ್ದರು. 
ಸುದೇಶ್ ಜೈನ್ ಮಕ್ಕಿಮನೆ ಸ್ವಾಗತಿಸಿದರು , ವಿಜೇಶ್ ದೇವಾಡಿಗ  ನಿರೂಪಿಸಿದರು, ಮಾಧವ ಎಂ ಎಸ್ ವಂದಿಸಿದರು.

Comments