ಕನ್ನಡ ಪುಸ್ತಕಗಳಿಗೆ ಪ್ರಶಸ್ತಿ: ಅರ್ಜಿ ಆಹ್ವಾನ



ಮಂಗಳೂರು:-  2019ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು 2020ನೇ ಸಾಲಿನ  ಜೂನ್ 20 ರಿಂದ ಜುಲೈ 31 ರವರೆಗೆ ಅರ್ಜಿ ಆಹ್ವಾನಿಸಲಾಗಿದೆ.
       ಬಿಸಲೇರಿ ಜಯಣ್ಣ ಮತ್ತು ಬಿಸಲ್ಭೆರಿ ಬ್ರದರ್ಸ್ ದತ್ತಿ: 2019ರಲ್ಲಿ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ಪ್ರಕಾರಗಳಾದ ವೈದ್ಯಕೀಯ ಶಾಸ್ತ್ರ, ಯಂತ್ರಶಾಸ್ತ್ರ, ವಿದ್ಯನ್ಮಾನ ಶಾಸ್ತ್ರದಲ್ಲಿ ಕನ್ನಡದಲ್ಲಿ ರಚಿತವಾದ 2019ನೇ ವರ್ಷದ ಶ್ರೇಷ್ಠ ಕೃತಿಗಳಿಗೆ ರೂ. 10,000 ಬಹುಮಾನ ನೀಡಲಾಗುವುದು.
ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ: 2019 ಜನವರಿ –ಡಿಸೆಂಬರ್ ವರೆಗೆ ಪ್ರಕಟವಾದ ದ.ಚಚನಿ ಕೃತಿಗಳು, ವಿವಿಧ ಬೇರೆ ಕ್ಷೇತ್ರಗಳಲ್ಲಿ ಅಂದರೆ ಶಾಸನ, ಇತಿಹಾಸ, ಜಾನಪದ, ರೈತ ಹಾಗೂ ಕೃಷಿ ಸಂಬಂಧ ಗಣಿತ, ವಿಜ್ಞಾನ ಇತ್ಯಾದಿ ವಿಷಯಗಳಿಗೆ, ವೀರಶೈವ ಸಾಹಿತ್ಯ ಸಂಶೋಧನಾತ್ಮಕ ಕೃತಿಗಳು ಎಂಬ ಪ್ರಕಾರಕ್ಕೆ ರೂ 10,000 ನಗದು ಮತ್ತು ಪ್ರಶಸ್ತಿ ಪತ್ರ.  ಶ್ರೀಮತಿ ಭಾರತಿ ಮೋಹನಕೋಟಿ ದತ್ತಿ: 2019 ಜನವರಿ – ಡಿಸೆಂಬರ್ ವರೆಗೆ ಪ್ರಕಟವಾದ ಅನುವಾದ ಸಾಹಿತ್ಯ ಕೃತಿಗೆ ರೂ 10,000 ನಗದು ಮತ್ತು ಪ್ರಶಸ್ತಿ ಪತ್ರ.
ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ: 2019 ನೇಯ ಇಸವಿಯಲ್ಲಿ ಪ್ರಕಟವಾದ ಯಾವುದೇ ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ ರೂ 7,500. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ: 2019 ಜನವರಿ ಯಿಂದ ಡಿಸೆಂಬರ್ ವರೆಗೂ ಪ್ರಕಟವಾದ ಜೈನಧರ್ಮದ ಇತಿಹಾಸ, ಸಾಹಿತ್ಯ, ಸಂಸ್ಕøತಿ ಹಾಗೂ ಕಲೆ, ಸಂಶೋಧನಾ ಗ್ರಂಥ, ಗ್ರಂಥ ಸಂಪಾದನೆ, ಪ್ರಾಚೀನ, ಗ್ರಂಥಗಳು ಹಾಗೂ ಅನುವಾದಕ್ಕೆ ಸಂಬಂಧಸಿದಂತೆ ರೂ 6,000 ನಗದು ಮತ್ತು ಪ್ರಶಸ್ತಿ ಪತ್ರ.
ವಸುದೇವ ಭೂಪಾಲಂ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ ರೂ 5,000, ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು 5 ಸಾವಿರ, ಮಕ್ಕಳ ಸಾಹಿತ್ಯ ಕೃತಿಗೆ ರೂ 2,000, ಅನುವಾದಿತ ಕೃತಿಗಳು, ವೈಚಾರಿಕ ಲೇಖನಗಳು ಕೃತಿಗೆ ರೂ 2,000 ಬಹುಮಾನ.
ದಿ||ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ: 2019 ರಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಹಾಸ್ಯ ಸಾಹಿತ್ಯ ಕೃತಿಗೆ ರೂ 5,000 ಬಹುಮಾನ.
ದಿ||ಡಾ. ಎ.ಎಸ್.ಧರಣೇಂದ್ರಯ್ಯ-ಮನೋ ವಿಜ್ಞಾನ ದತ್ತಿ: 2019 ರಲ್ಲಿ ಪ್ರಕಟವಾದ ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ 5,000 ಬಹುಮಾನ.
ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ: 2019 ಜನವರಿಯಿಂದ ಡಿಸೆಂಬರ್ ವರೆಗೂ ಪ್ರಕಟವಾದ ಕನ್ನಡ ಕಾದಂಬರಿ ಕೃತಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ: ಕನ್ನಡ ಮಹಿಳಾ ಬರಹಗಾರರ ವಿವಿಧ ಪ್ರಕಾರಗಳ ಆರು ವರ್ಷಗಳ ಅವಧಿಯಲಿ ್ಲ (2010ನೇ ಜನವರಿ ತಿಂಗಳಿಂದ 2019 ನೇ ಡಿಸೆಂಬರ್ ತಿಂಗಳವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟವಾದ ಕಥೆ ಕೃತಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ: 2019 ಜನವರಿ–ಡಿಸೆಂಬರ್ ವರೆಗೆ ಪ್ರಕಟವಾದ ಕಥಾ ಸಂಕಲನ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ. (ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಮಾತ್ರ ಅವಕಾಶ).
ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನ ಸವಿ ನೆನಪಿನ ದತ್ತಿ (ಎಲ್.ಬಸವರಾಜು ದತ್ತಿ); 2019 ಜನವರಿ–ಡಿಸೆಂಬರ್ ವರೆಗೆ ಸಾಲಿನ ಯಾವುದೇ ಪ್ರಕಾರದ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ: 2019 ಜನವರಿ–ಡಿಸೆಂಬರ್ ವರೆಗೆ ಕನ್ನಡದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದು. ಯಾವುದೇ ಪ್ರಕಾರ ಶ್ರೇಷ್ಠ ಕೃತಿಗೆ ರೂ. 5,000 ನಗದು ಮತ್ತು ಪ್ರಶಸ್ತಿ ಪತ್ರ.
ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ: 2019 ಜನವರಿ–ಡಿಸೆಂಬರ್ ವರೆಗೆ ಪ್ರಕಟವಾದ ಶ್ರೇಷ್ಠ ಕಾದಂಬರಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ: 2019 ಜನವರಿ–ಡಿಸೆಂಬರ್ ವರೆಗೆ ಪ್ರಕಟವಾದ ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರ ಲೇಖನಗಳಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ಶ್ರೀಮತಿ ಗಂಗಮ್ಮ ಶ್ರೀ ಬಿ. ಶಿವಣ್ಣ ದತ್ತಿ: 2019 ಜನವರಿ–ಡಿಸೆಂಬರ್ ವರೆಗೆ ಪ್ರಕಟವಾದ ಜಾತ್ಯಾತೀತ ವಿಚಾರವನ್ನೊಳಗೊಂಡ ಕೃತಿಗೆ ರೂ 5,000 ನಗದು ಮತ್ತು ಪ್ರಶಸ್ತಿ ಪತ್ರ.
ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ: 2019 ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕ್ಷೇತ್ರದ ಗದ್ಯ ಪ್ರಕಾರದ ಕತೆಗೆ ಸಂಬಂಧಿಸಿದಂತೆ ಕನಿಷ್ಠ 25 ಪುಟಗಳುಳ್ಳ ಪುಸ್ತಕಕ್ಕೆ ರೂ 2,000 ಬಹುಮಾನ.  
ಪಳಕಳ ಸೀತಾರಾಮಭಟ್ಟ ದತ್ತಿ: 2019 ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ರೂ 2,000 ಬಹುಮಾನ.
 ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ: 2019 ಜನವರಿ – ಡಿಸೆಂಬರ್ ವರೆಗೆ ಪ್ರಕಟವಾದ ಸಣ್ಣ ಕಥಾ ಸಂಕಲನಕ್ಕೆ ರೂ 2000 ನಗದು ಮತ್ತು ಪ್ರಶಸ್ತಿ ಪತ್ರ.
ದಿ||ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ: 2019 ರಲ್ಲಿ ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ. 1,000 ಬಹುಮಾನ.
 ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ ದತ್ತಿ: 2019 ರಲ್ಲಿ ಪ್ರಕಟವಾದ ಪ್ರಾಚೀನ ಸಂಪಾದಿತ ಕೃತಿಗೆ ರೂ. 1000 ಬಹುಮಾನ ಹಾಗೂ ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
ಜಿ.ಆರ್. ರೇವಯ್ಯ ದತ್ತಿ: 2019 ರಲ್ಲಿ ಪ್ರಕಟವಾದ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ. 1,000 ಬಹುಮಾನ.
 ಡಾ. ಆರ್.ಜೆ. ಗಲಗಲಿ ದತ್ತಿ: 2019 ರಲ್ಲಿ ಪ್ರಕಟವಾದ ಉತ್ತಮ ಕವನ ಸಂಕಲನ ಒಂದಕ್ಕೆ ರೂ. 1,000 ಬಹುಮಾನ, (ಬೆಳಗಾವಿ ಜಿಲ್ಲೆಯ ಬರಹಾಗರರಿಗೆ ಮಾತ್ರ).
ದಿ. ಕಾಕೋಳು ಸರೋಜಮ್ಮ ದತ್ತಿ: 2019 ರಲ್ಲಿ ಪ್ರಕಟವಾದ ನಾಟಕ  ಪ್ರಕಾರಕ್ಕೆ ರೂ. 1000 ಬಹುಮಾನ.
ನಾ.ಕು. ಗಣೇಶ್ ದತ್ತಿ :2019 ರಲ್ಲಿ ಪ್ರಥಮ ಕವನ ಸಂಕಲನಕ್ಕೆ ರೂ. 1000 ಬಹುಮಾನ.
 ಶ್ರೀಮತಿ ಸಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ: 2019 ಜನವರಿ – ಡಿಸೆಂಬರ್‍ವರೆಗೆ ಪ್ರಕಟವಾದ ಕವನ ಸಂಕಲನಕ್ಕೆ ರೂ. 1,000 ನಗದು ಮತ್ತು ಪ್ರಶಸ್ತಿ ಪತ್ರ.
ಶ್ರೀ ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ: 2019 ಜನವರಿ – ಡಿಸೆಂಬರ್ ವರೆಗೆ ಪ್ರಕಟವಾದ ಸಣ್ಣ ಕಥಾ ಸಂಕಲನಕ್ಕೆ ರೂ. 1000 ನಗದು ಮತ್ತು ಪ್ರಶಸ್ತಿ ಪತ್ರ.
 ಮಲ್ಲಿಕಾ ಪ್ರಶಸ್ತಿ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ. 500 ಬಹುಮಾನ ಹಾಗೂ ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
 ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ: 2019 ರಲ್ಲಿ ಪ್ರಕಟವಾದ ಮಹಿಳೆಯರ ಅತ್ತುತ್ತಮವಾದ ಕೃತಿಗೆ ರೂ. 500 ಬಹುಮಾನ.
 ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ: 2019 ರಲ್ಲಿ ಪ್ರಕಟವಾದ ಲೇಖಕಿ ಇಬ್ಬರ ಮಹತ್ವದ ಕೃತಿಗೆ ರೂ. 500 ಬಹುಮಾನ.  
ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ: 2019 ರಲ್ಲಿ ಪ್ರಕಟವಾದನ ಅತ್ಯುತ್ತಮ ಮಹಿಳಾ ಸಾಹಿತ್ಯ( ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ. 500 ಬಹುಮಾನ.
 ಶ್ರೀಮತಿ ನೀಲಗಂಗಾ ದತ್ತಿ: 2019 ರಲ್ಲಿ ಪ್ರಕಟವಾದ  ಮಹಿಳೆಯರ  ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲೀನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ. 500 ಬಹುಮಾನ.
ಶ್ರೀಮತಿ ಕೆ.ಎಸ್.ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ: 2019 ರಲ್ಲಿ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕಾದಂಬರಿ ರೂ. 500 ಬಹುಮಾನ.
ಶ್ರೀಮತಿ ಶಾರದಾ ಆರ್. ರಾವ್ ದತ್ತಿ: 2019 ರಲ್ಲಿ ಪ್ರಕಟವಾದ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ. 250 ಬಹುಮಾನ.
 ದಿ. ಎಚ್. ಕರಿಯಣ್ಣ ದತ್ತಿ; 2019 ರಲ್ಲಿ ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ. 500 ಬಹುಮಾನ.
ಡಾ. ಎಚ್. ನರಸಿಂಹಯ್ಯ ದತ್ತಿ: 2019 ರಲ್ಲಿ ಪ್ರಕಟವಾದ ವೈಚಾರಿಕ ಹಾಗೂ ವ್ಶೆಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ. 500 ಬಹುಮಾನ.
ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ: 2019 ರಲ್ಲಿ ಪ್ರಕಟವಾದ ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿ ರೂ. 500 ಬಹುಮಾನ. ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ. ರತ್ನಾಕರವರ್ಣಿ –ಮುದ್ದಣ-ಅನಾಮಿಕ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ ಪದ್ಯಕೃತಿ ಒಂದಕ್ಕೆ ತಲಾ ರೂ. 500 ಬಹುಮಾನ. ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
ಪಿ.ಶಾಂತಿಲಾಲ್ ದತ್ತಿ: 2019 ರಲ್ಲಿ ಪ್ರಕಟವಾದ ಜೈನ ಸಾಹಿತ್ಯ ಕುರಿತ ಯಾವುದೇ ಕನ್ನಡ ಪುಸ್ತಕಕ್ಕೆ ರೂ. 500 ಬಹುಮಾನ.
ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮವಾದ ಜಾನಪದ ಸಾಹಿತ್ಯ ಕೃತಿ ರೂ. 500 ಬಹುಮಾನ.
ಕುಂಬಾಸ ಪ್ರಶಸ್ತಿ ದತ್ತಿ: 2019 ರಲ್ಲಿ ಪ್ರಕಟವಾದ ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ 500 ಬಹುಮಾನ. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು).
 ಪ್ರೊ.  ಡಿ.ಸಿ. ಅನಂತಸ್ವಾಮಿ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ. 500 ಬಹುಮಾನ. ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
‘ಸಿಸು’ ಸಂಗಮೇಶ ದತ್ತಿ: 2019 ರಲ್ಲಿ ಪ್ರಕಟವಾದ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ. 500 ಬಹುಮಾನ. ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
 ಶ್ರೀಮತಿ ಪಂಪಮ್ಮ - ಶರಣೇಗೌಡ ವಿರುಪಾಪುರ ದತ್ತಿ: 2019 ರಲ್ಲಿ ಪ್ರಕಟವಾದ ಉತ್ತಮ ಸಾಹಿತ್ಯ ಕೃತಿಗೆ ರೂ. 500 ಬಹುಮಾನ.(ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ).
 ಶ್ರೀ ಕೆ.ವಾಸುದೇವಾಚಾರ್ ದತ್ತಿ: 2019 ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನ ಕೃತಿಗೆ ರೂ. 500 ಬಹುಮಾನ. ಸ್ಪರ್ಧೆಗೆ ಎಲ್ಲಾರಿಗೂ ಮುಕ್ತ ಅವಕಾಶ.
ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ: 2019 ರಲ್ಲಿ ಪ್ರಕಟವಾದ ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ. 250 ಬಹುಮಾನ.
 ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ: (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ – ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) 2019 ರಲ್ಲಿ ಪ್ರಕಟವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ. 250 ಬಹುಮಾನ. ( ಪುಸ್ತಕ 12 ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿಯಾಗಿರಬೇಕು).
      ಸ್ಪರ್ಧೆ ನಿಯಮಗಳು ಇಂತಿವೆ; ಪತ್ರಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560015. ಇವರಿಗೆ ಜುಲೈ 31 ರೊಳಗೆ ತಲುಪುವಂತೆ ಕಳುಹಿಸಬೇಕು. ಪರಿಶೀಲನೆಗೆ ಬಂದ ಪುಸ್ತಕಗಳನ್ನು  ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ. ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ. ಪಿ.ಹೆಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ನಮೂದಿಸಬೇಕು. ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಬರೆಯಬಹುದು.
    ಹೆಚ್ಚಿನ ಮಾಹಿತಿಗಾಗಿ: ವೆಬ್‍ಸ್ಶೆಟ್ ತಿತಿತಿ.ಞಚಿsಚಿಠಿಚಿ.iಟಿ ಅಥವಾ ದೂರವಾಣಿ ಸಂಖ್ಯೆ 080 -26612991, 26623584 ಗೆ ಸಂಪರ್ಕಿಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಪ್ರಕಟಣೆ ತಿಳಿಸಿದೆ.

Comments