ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕೊರೊನಾ ಸೋಂಕಿತರ ಬಿಲ್ ಸರಕಾರ ಪಾವತಿಸಲಿ; ಐವನ್ಕೋವಿಡ್ 19 ಸೋಂಕಿತರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದ್ದು  ಖಾಸಗಿ ಆಸ್ಪತ್ರೆ ಯಲ್ಲಿ ತಗಲುವ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮಾಜಿ  ಎಂಎಲ್ಸಿ ಐವನ್ ಡಿಸೋಜ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬಿಲ್ ಮಾಡಿದರೆ ಜನಸಾಮಾನ್ಯರಿಗೆ ಅದನ್ನು ಕಟ್ಟಲು ಕಷ್ಟವಾಗಲಿದೆ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಚಿಕಿತ್ಸೆ ವೆಚ್ಚವನ್ನು ಪಡೆಯಲಿ ಅಥವಾ ಆ ವೆಚ್ಚವನ್ನು ಸರ್ಕಾರವೇ ಕಟ್ಟಲಿ  ಎಂದರು

Comments