ವ್ಯಕ್ತಿಯನ್ನು ಕೊಲ್ಲಬಹುದು ಆತನ ಆದರ್ಶವನ್ನಲ್ಲ - ಸಂತೋಷ್ ಬಜಾಲ್


ಇಂದು ದೇಶವನ್ನು ಆಳುವಂತಹ ವ್ಯವಸ್ಥೆ ಬಹಳ ವ್ಯವಸ್ಥಿತವಾಗಿ ನಮ್ಮ ಸಂವಿಧಾನದ ಆಶಯವನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಇಂತಹ ದೇಶವಿರೋಧಿ, ಜನವಿರೋಧಿ ನೀತಿಗಳ ವಿರುದ್ದ ಸಂವಿಧಾನದ ರಕ್ಷಣೆಗಾಗಿ, ಕೋಮು ಸೌಹಾರ್ದತೆಗಾಗಿ ಮತ್ತು ನವ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಹೋರಾಟದಲ್ಲಿ ತನ್ನ  ಪ್ರಾಣವನ್ನೇ ಮುಡಿಪಾಗಿಟ್ಟವರಲ್ಲಿ ಶ್ರೀನಿವಾಸ್ ಬಜಾಲ್ ಕೂಡ ಒಬ್ಬರು. ಶ್ರೀನಿವಾಸ್ ಬಜಾಲ್ ದೈಹಿಕವಾಗಿ ಕೊಲ್ಲಲಾಗಿದ್ದರೂ ಅವರ ಆದರ್ಶವನ್ನು ಕೊಲ್ಲಲಾಗಿಲ್ಲ ಎಂದು ಡಿವೈಎಫ್ಐ ದ.ಕ ಜಿಲ್ಲಾಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಇಂದು ಪಕ್ಕಲಡ್ಕದಲ್ಲಿ  18 ವರುಷದ ಹಿಂದೆ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ     ಕಾಂ ಶ್ರೀನಿವಾಸ್ ಬಜಾಲ್ ಅವರ ಹುತಾತ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿಂದು ಚಿಂತಾಜನಕ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಸೊಂಕಿನ ಹಾವಳಿಯಿಂದ ಜನ ತನ್ನ ಉದ್ಯೋಗ ಮತ್ತು ಬದುಕನ್ನು ಸಂಪೂರ್ಣ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಜೊತೆಯಾಗಿ ನಿಲ್ಲಬೇಕಾಗಿದ್ದ ಸರಕಾರ ಜನ ವಿರೋಧಿಗಳಾಗಿ ವರ್ತಿಸಿ ಸರ್ವಾಧಿಕಾರಿ ಧೋರಣೆಯನ್ನು ಜಾರಿಗೊಳಿಸುತ್ತಿದ್ದೆ. ಪೆಟ್ರೋಲ್, ಡೀಸಲ್ ಬೆಲೆ ಕಳೆದ 16 ದಿನಗಳಿಂದ ನಿರಂತರವಾಗಿ ಏರುತ್ತಿದೆ, ಆರೋಗ್ಯಕ್ಷೇತ್ರವನ್ನು ಸಂಪೂರ್ಣ ಖಾಸಗೀ ಆಸ್ಪತ್ರೆಗಳ  ತಿಜೋರಿ ತುಂಬುವಂತಹ ಹೊಸ ಆದೇಶಗಳನ್ನು ಸರಕಾರ ಹೊರಡಿಸುತ್ತಿದೆ. ಇಂತಹ ಜನವಿರೋಧಿ ನೀತಿಗಳ ವಿರುದ್ದ ದ್ವನಿ ಎತ್ತುತ್ತಿರುವ ಎಡಪಂಥೀಯ ಸಂಘಟನೆಗಳನ್ನು       ಮತ್ತದರ ನಾಯಕರುಗಳನ್ನು ದೇಶದ್ರೋಹಿಗಳೆಂದು ಬಿಂಬಿಸುವ, ಜನರ ವಿರುದ್ದ ಎತ್ತಿಕಟ್ಟುವ ಕೆಲಸಗಳನ್ನು ಕೋಮುವಾದಿ ಸಂಘಟನೆಗಳು ಮಾಡುತ್ತಿದ್ದೆ. ಆದರೆ ಒಂದು ಕ್ರಾಂತಿಕಾರಿ ಸಂಘಟನೆಯ ಕ್ರಾಂತಿಕಾರಿಗಳು ಇಂತಹ ಯಾವುದೇ ಅಡೆತಡೆಗಳಿಗೆ ಹಿಂಜರಿಯುವವರಲ್ಲ. ಒಂದು ಉನ್ನತವಾದ ಆದರ್ಶಗಳನ್ನು ಮೈಗೂಡಿಸಿಕೊಂಡ ನಮ್ಮ ಕಾರ್ಯಕರ್ತರು  ನವಸಮಾಜದ ನಿರ್ಮಾಣಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ ಎಂಬುದನ್ನು ಹುತಾತ್ಮ ಗೊಂಡ  ಶ್ರೀನಿವಾಸರಂತಹ ಕಾರ್ಯಕರ್ತರೇ ಸಾಕ್ಷಿ ಎಂದರು. 

ಈ ವೇಳೆ ಕಾರ್ಮಿಕ ಮುಖಂಡರಾದ ಲೋಕೇಶ್ ಎಂ ದ್ವಜಾರೋಹಣಗೈದರು. ಸುರೇಶ್ ಬಜಾಲ್, ದೀಪಕ್ ಬೊಲ್ಲ‌ , ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತೃತ್ವವನ್ನು ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ , ಧಿರಾಜ್, ನಾಗರಾಜ್ ಬಜಾಲ್, ವರಪ್ರಸಾದ್ ಕುಲಾಲ್, ಪ್ರಕಾಶ್ ಶೆಟ್ಟಿ, ಹರಿಹರನ್, ಅಖಿಲೇಶ್, ಮುಂತಾದವರು ವಹಿಸಿದ್ದರು.

 ಕಾರ್ಯಕ್ರಮಕ್ಕೂ ಮುನ್ನ ಶ್ರೀನಿವಾಸ್ ಬಜಾಲ್ ಹತ್ಯೆಯಾದ ಸ್ಥಳದಿಂದ ಘೋಷಣೆಗಳನ್ನು ಕೂಗುವ ಮೂಲಕ ಪಕ್ಕಲಡ್ಕ ಬಸ್ ನಿಲ್ದಾಣದವರೆಗೂ ಮೆರವಣೆಗೆ ನಡೆಸಲಾಯಿತು.

Comments