ದ.ಸಂ.ಸದಿಂದ ಬಡ ಕುಟುಂಬಗಳಿಗೆ ಅಹಾರ ಸಾಮಾಗ್ರಿಗಳ ಕಿಟ್ ವಿತರಣೆ


ಮಂಗಳೂರು : ಲಾಕ್ ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಪ.ಜಾತಿ., ಪ.ವರ್ಗಗಳ ಬಡ ಕುಟುಂಬಗಳಿಗೆ ದ.ಸಂ.ಸ ಪ್ರೋ. ಕೃಷ್ಣಪ್ಪ ಸ್ಥಾಪಿತ, ಮಂಗಳೂರು ನಗರ ಶಾಖೆಯ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ಟನ್ನು   ನಗರ ವ್ಯಾಪ್ತಿಯಲ್ಲಿ ವಿತರಿಸಲಾಯಿತು.  ಸುಮಾರು 40 ಆಹಾರ ಸಾಮಾಗ್ರಿಗಳ ಕಿಟ್ಟನ್ನು ದ.ಸಂ.ಸ ಜಿಲ್ಲಾ ಸಂಚಾಲಕ ಶೇಖರ್ ಚಿಲಿಂಬಿಯವರ ಮುಖಾಂತರ ವಿತರಿಸಲಾಯಿತು.

ತಾ.ಸಂಚಾಲಕ ನಾಗೇಶ್ ಬಲ್ಮಠ,  ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ್ ವಾಮಂಜೂರು, ಅಖಿಲ ಭಾರತ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಕುಮಾರ್,  ಮಹಿಳಾ ಸಂಚಾಲಕಿ ಯಶೋಧ ಚಿಲಿಂಬಿ, ಹೇಮಂತ ಕಾಪಿಕಾಡು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments