ದ.ಕ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ; ನಿನ್ನೆ ಮೂರು, ಇಂದು ಓರ್ವ ಬಲಿ


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಎರಡು ದಿನದಲ್ಲಿ ನಾಲ್ಕು ಬಲಿಯಾಗಿದೆ.
ಇಂದು ಉಳ್ಳಾಲದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತ ಈ ಮಹಿಳೆಗೆ ಪಿತ್ತಕೋಶದ ಸಮಸ್ಯೆಯು ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ನಿನ್ನೆ ಕೊರೊನಾಗೆ ಸುರತ್ಕಲ್, ಜೋಕಟ್ಟೆ, ಬಂಟ್ವಾಳದ ಮಹಿಳೆ ಸಾವನ್ನಪ್ಪಿದ್ದರು.ನಿನ್ನೆ ಒಂದೇ ದಿನ ಮೂರು ಸಾವು ಸಂಭವಿಸಿದರೆ ಇಂದು‌ ಮುಂಜಾನೆಯೆ ಓರ್ವ ಮಹಿಳೆ ಸಾವನ್ನಪ್ಪಿ ಆತಂಕ ಸೃಷ್ಟಿಯಾಗಿದೆ.

Comments